ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಂದ ಕಿಟ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ಮೇಸನ್, ಇಲೇಕ್ಟ್ರೀಕಲ್,ಟೈಲ್ಸ್ ಮತ್ತು ವೆಲ್ಡಿಂಗ್‌ಟೋಲ್‌ಗಳನ್ನು ಕಾರ್ಮಿಕರಿಗೆ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು,ನೋಂದಾಯಿತ ಕಟ್ಟಡ ಕಾರ್ಮಿಕರು ಅರ್ಜಿಗಳೊಂದಿಗೆ ಚಾಲ್ತಿಯಲ್ಲಿರುವ ಗುರುತಿನ ಚೀಟಿ, ಆಧಾರ ಕಾರ್ಡ್, ಭಾವಚಿತ್ರವನ್ನು ಲಗತ್ತಿಸಬೇಕು.ಕಟ್ಟಡ ಕಾರ್ಮಿಕರು ನೋಂದಾಯಿಸಿ ಒಂದು ವರ್ಷ ಪೂರ್ಣಗೊಂಡಿರಬೇಕು, ಕಾರ್ಮಿಕರ ಗುರುತಿನ ಚೀಟಿಯಲ್ಲಿ ನಮೂದಿಸಿದ ವೃತ್ತಿಯ ಕಿಟ್‌ಗಳನ್ನು ಮಾತ್ರ ಫಲಾನುಭವಿಸಗಳಿಗೆ ವಿತರಿಸಲಾಗುವುದು.
ಬಸವನ ಬಾಗೇವಾಡಿಯಲ್ಲಿನ ವೀರಭದ್ರೇಶ್ವರ ನಗರ ಹೋಟಲ್ ವಿಮೋಚನ ಹಿಂದುಗಡೆ ಇರುವ ಕಾರ್ಮಿಕ ನಿರೀಕ್ಷಕರ ಕಚೇರಿ, ವಿನಾಯಕ ನಗರ ನಿಡಗುಂದಿ ಹಾಗೂ ಕೊಲ್ಹಾರದ ಬಸವ ವೃತ್ತ ಮುಖ್ಯ ರಸ್ತೆಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅಕ್ಟೋಬರ್ ೬ ರಿಂದ ೧೬ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಸವನ ಬಾಗೇವಾಡಿಯ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
