Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ

ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂಭ್ರಮದಿಂದ ನಡೆದ ರಾಯರ ಉತ್ತಾರಾರಾಧನೆ
(ರಾಜ್ಯ ) ಜಿಲ್ಲೆ

ಸಂಭ್ರಮದಿಂದ ನಡೆದ ರಾಯರ ಉತ್ತಾರಾರಾಧನೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಲ್ಲಿನ ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಗುರು ರಾಯರ ಆರಾಧನಾ ಮಹೋತ್ಸವವು ಮಂಗಳವಾರ ಉತ್ತಾರಾರಾಧನೆ ಮೂಲಕ ಸಂಪನ್ನಗೊಂಡಿತು.
ಬೆಳಗ್ಗೆ ಸುಪ್ರಭಾತ, ವಿವಿಧ ಅರ್ಚಕರ ನೇತೃತ್ವದಲ್ಲಿ ರಥಾಂಗ ಹವನ, ಶ್ರೀಹರಿ-ವಾಯುಸ್ತುತಿ ಪುನಶ್ಚರಣ, ಶ್ರೀಗುರುಸ್ತೋತ್ರ ಅಷ್ಟೋತ್ತರ ಶತಃಪಠಣಪೂರ್ವಕ ಶ್ರೀಗುರುಸಾರ್ವಭೌಮರಿಗೆ 108 ಕಲಶದಿಂದ ವಿವಿಧ ಹಣ್ಣು ಹಂಪಲಗಳ ಕ್ಷೀರಾಭಿಷೇಕ ಹಾಗೂ ಮಹಾಪಂಚಾಮೃತಾಭಿಷೇಕ ನೆರವೇರಿಸಲಾಯಿತು.
ನಂತರ ಶ್ರೀಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಸೇವೆ ಜತೆಗೆ ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಿದ ರಜತ ರಥೋತ್ಸವ ಸಂಭ್ರಮದಿಂದ ನಡೆಯಿತು. ವಿವಿಧ ಭಜನಾ ತಂಡಗಳು ಗುರು ರಾಯರ ಸ್ಮರಣೆಯ ಹಾಡುಗಳನ್ನು ಹಾಡಿದರು. ಬಡಾವಣೆಯ ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಕೋಲಾಟ ಆಡಿ ಗಮನ ಸೆಳೆದರು.
ಆರಾಧನಾ ಮಹೋತ್ಸವದ ಕೊನೆಯ ದಿನದ ಹಿನ್ನೆಲೆಯಲ್ಲಿ ಅಪಾರ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದು ಪುನೀತರಾದರು.
ಗಣ್ಯರಾದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನೂತನ ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ರಾಜು ಕುರಿಯವರ, ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಮುಖಂಡರಾದ ರಾಜೇಶ ದೇವಗಿರಿ, ಉಮೇಶ ವಂದಾಲ ಸಂಜೆಯಪಾಟೀಲ್ ಕನಮಡಿ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದರು.
ಅರ್ಚಕರಾದ ಶ್ರೀನಿವಾಸ ಆಚಾರ ಗೊಠೆ, ಅಪ್ಪಣ್ಣಾಚಾರ ಗೊಠೆ, ಪ್ರಾಣೇಶ ಮಮದಾಪೂರ, ಶ್ರೀಮಠದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪ್ರಕಾಶ್ ಅಕ್ಕಲಕೋಟ್ ಶ್ರೀನಿವಾಸ ಬೆಟಗೇರಿ, ಅಪ್ಪಣ್ಣ ಗಾಯಿ, ವಿಜಯ ಜೋಶಿ ವಿಕಾಸ್ ಪದಕ್ಕೆ ವಿನಾಯಕ ಕುಲಕರ್ಣಿ, ನಾರಾಯಣ ಜೋಶಿ, ದತ್ತಾತ್ರೇಯ ಜೋಶಿ, ವಿಶಾಲ ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ಅನಿಲ ಅಗ್ನಿಹೋತ್ರಿ ಗೋವಿಂದ ದೇಶ್ಪಾಂಡೆ ಮತ್ತಿತರರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ

ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ

ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ
    In (ರಾಜ್ಯ ) ಜಿಲ್ಲೆ
  • ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ
    In (ರಾಜ್ಯ ) ಜಿಲ್ಲೆ
  • ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ
    In ವಿಶೇಷ ಲೇಖನ
  • ಶಿಸ್ತು, ಭಾವೈಕ್ಯ ಮೂಡಿಸುವ ಭಾರತ ಸೇವಾದಳ :ನಡುಗಡ್ಡಿ
    In (ರಾಜ್ಯ ) ಜಿಲ್ಲೆ
  • ಅರ್ಹ‌ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯಬಾರದು
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಕಾನಿಪ ಸಂಘದ ವಿವಿಧ ಸ್ಥಾನಗಳಿಗೆ ಹಿರಿಯ ಪತ್ರಕರ್ತರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಿ :ಬೋಸಗಿ
    In (ರಾಜ್ಯ ) ಜಿಲ್ಲೆ
  • ನಾಳೆ ಸಚಿವ ಎಂ.ಬಿ.ಪಾಟೀಲ ರಿಂದ ನೂತನ ಶಾಲಾ ಕಟ್ಟಡ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.