ಚಡಚಣ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಡೀರ್ ಬೇಟಿ | ಸಿಬ್ಬಂದಿ ಕೊರತೆ |ಬಂದಾದ ಮೆಡಿಕಲ್ ಸ್ಟೋರ್
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೆಚ್ಚುವರಿ ನೋಂದಣಾಧಿಕಾರಿ ಎಂ.ವಿ.ನರಶಿಂಸಾ ಹಾಗೂ ರಾಯಚೂರ ಪೋಲಿಸ್ ಇನಸ್ಪೆಕ್ಟರ್ ರವಿ ಪುರುಷೋತ್ತಮ ಅವರು ಅಚ್ಚರಿಯ ಬೇಟಿ ನೀಡಿದರು.
ಪರಿಶೀಲನೆಯ ವೇಳೆ ಅನೇಕ ವಿಭಾಗಗಳಲ್ಲಿ ಸಿಬ್ಬಂದಿ ಗೈರು ಇದ್ದದ್ದು ಕಂಡುಬಂದಿತು. ಆರೋಗ್ಯ ಕೇಂದ್ರದಲ್ಲಿ ಬಂದ್ ಇರುವ ಮೆಡಿಕಲ್ ಸ್ಟೋರ್, ಎಕ್ಸರೇ ಕೊಠಡಿ, ಪ್ರಯೋಗಾಲಯ, ಮಕ್ಕಳ ಆರೋಗ್ಯ ಪುನಶ್ಚೇತನ ಕೊಠಡಿ, ಕಣ್ಣು ತಪಾಸಣಾ ಕೊಠಡಿ, ಡಯಾಲಿಸಿಸ್ ಕೋಣೆ ಗಳಿಗೆ ಬೀಗ ಹಾಕಿರುವದು ಕಂಡುಬಂದಿತು.
ಕೋಠಡಿ ಬೀಗ ತೆಗೆಯಲು ಬೀಗದ ಕೈ ಸಲುವಾಗಿ ಪರದಾಡಿದ ಸಿಬ್ಬಂದಿ, ಅದರ ಜೊತೆಗೆ ಡಾಕ್ಟರ್ ಎಲ್ಲಿ ಎಂಬ ಪ್ರಶ್ನೆಗಳಿಗೆ ಸಿಬ್ಬಂದಿಯಿಂದ ಬಂದ ಹಾರಿಕೆ ಉತ್ತರದಿಂದ ಕೆಂಡಾಮಂಡಲರಾದ ಲೋಕಾ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಭೇಟಿಯಿಂದ ಆಸ್ಪತ್ರೆ ಸಿಬ್ಬಂದಿಯಲ್ಲಿ ಗಾಬರಿ ಮೂಡಿದ್ದು, ಮುಂದಿನ ದಿನಗಳಲ್ಲಿ ಸೇವಾ ಗುಣಮಟ್ಟ ಸುಧಾರಿಸುವ ನಿರೀಕ್ಷೆ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

