ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಹತ್ತಾರು ಗ್ರಾಮಗಳ ರೈತರಿಗೆ ನೀರಾವರಿಯ ಉಪಯೋಗ ದೊರೆಯಲಿ ಎಂಬ ಉದ್ದೇಶದಿಂದ ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಿಸುವ ಮೂಲಕ ರೈತರ ಪಾಲಿಗೆ ಭಗಿರಥ ಎನಿಸಿದ್ದ ಮಾಜಿ ಕೇಂದ್ರ ಸಚಿವ ದಿ. ಸಿದ್ದು ನ್ಯಾಮಗೌಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಿ. ಸಿದ್ದು ನ್ಯಾಮಗೌಡರ 77ನೇ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಿಸಿ ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ ಮಾತನಾಡಿದರು.
ಮುಖಂಡರಾದ ಮೀರಾ ಒಂಟಮುರಿ, ಶ್ಯಾಮರಾವ ಘಾಟಗೆ, ದಿಲಾವರ ಶಿರೋಳ, ಅನ್ವರ್ ಮೋಮಿನ್, ಪರಮಾನದ ಗವರೋಜಿ, ಸಂಜು ಮೀಶಿ, ರೋಹಿತ್ ಸೂರ್ಯವಂಶಿ, ನವೀನ ಕಲೂತಿ, ಮೈನು ಕಾಟಿಕ, ನಾನಾ ಮೊರೆ, ನಾಗು ಮೀಶಿ, ಮಲ್ಲು ಶಿರಹಟ್ಟಿ, ಮುಂತಾದವರು ಇದ್ದರು.

