ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಘದ ಸದಸ್ಯರು ಕಾನೂನು ಹಾಗೂ ನಿಯಮಗಳನ್ನು ಅರಿತು ವ್ಯವಹಾರದಲ್ಲಿ ಭಾಗವಹಿಸುವಂತಾಗಲಿ ಎಂದು ನಿವೃತ್ತ ಡಿವೈಎಸ್‌ಪಿ ಬಸನಗೌಡ ಹುಲಸಗುಂದ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಜರುಗಿದ ಕೃಪಾ ವಿವಿಧೋದ್ದೇಶಗಳ ಸಂಘದ ೧೨ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಇತ್ತೀಚೆಗೆ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಇದನ್ನು ಸಂಘದ ಸದಸ್ಯರು ಅರಿಯಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಬಾಬುಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ಸರ್ವಸದಸ್ಯರು ಹಾಗೂ ಸಿಬ್ಬಂದಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದರು.
ಸಂಸ್ಥಾಪಕ ಹಾಗೂ ನಿರ್ದೇಶಕ ಸೋಮನಗೌಡ ಪಾಟೀಲ ಮಾತನಾಡಿ, ಸಂಘ ಮುಂದಿನ ದಿನಗಳಲ್ಲಿ ಉತ್ತರೋತ್ತರವಾಗಿ ಬೆಳೆದು ಎಲ್ಲರಿಗೂ ನೆರಳು ನೀಡುವ ಹೆಮ್ಮರವಾಗಲಿ ಎಂದರು.
ಇದೇ ಸಂದರ್ಭಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಿ.ಕೆ.ಪಾಟೀಲ, ಗೋಪಾಲ ನಾಯಕ, ಬಿ.ಎಮ್.ಪಾಟೀಲ, ಸುರೇಶ ದೇಸಾಯಿ ಹಾಗೂ ಸಹಕಾರಿ ಭಾರತಿಗೆ ಆಯ್ಕೆಯಾದ ವಿನೋದಗೌಡ ಪಾಟೀಲ, ಕೆ.ಎಸ್.ಕೋರಿ, ಯಲ್ಲಾಲಿಂಗಪ್ರಭು ವಡ್ಡೋಡಗಿ ಹಾಗೂ ರಾಜೀವ ಗುತ್ತೇದಾರರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಶಿವರಾಯ ಚವ್ಹಾಣ, ನಿರ್ದೇಶಕರುಗಳಾದ ಆರ್.ಎಸ್.ಮಠ, ಕಾಶೀನಾಥ ಸಾಲಕ್ಕಿ, ಎ.ಎಸ್.ಪಾಟೀಲ, ಎಮ್.ಎಸ್.ಕಕ್ಕಳಮೇಲಿ, ಎಮ್.ಕೆ.ಕುಂಬಾರ, ಜೆ.ಎಲ್.ಸುಗತೇಕರ, ಎಸ್.ಆರ್. ಹಚಡದ, ವಿ.ಆರ್.ಯಲಗೂರ, ಪಿ.ಡಿ.ಚೌಧರಿ ಮುಖ್ಯ ವ್ಯವಸ್ಥಾಪಕ ವಿನೋದ ಬಿರಾದಾರ, ಅರುಣ ಮಣೂರ, ಪ್ರವೀಣ ಅಂಗಡಿ, ಪ್ರತೀಕ ಬಿರಾದಾರ, ರವಿ ವಡ್ಡೋಡಗಿ, ಲಿಖಿತ ಜಾಧವ, ಬಸವರಾಜ ದೊಡ್ಡಮನಿ, ಹಾಗೂ ಸದಸ್ಯರು ಇದ್ದರು.

