ಚಕ್ಕಡಿಯಲ್ಲಿ ಮೆರವಣಿಗೆ | ಭಾರ ಎತ್ತುವ ಸ್ಪರ್ಧೆಗಳಿಗೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಹಲವಾರು ಪ್ರತಿಭೆಗಳು, ಪ್ರತಿಭೆಗೆ ತಕ್ಕ ಪ್ರೋತ್ಸಾಹ, ಸಾಂಸ್ಕೃತಿಕವಾಗಿ, ಸಾಂಪ್ರದಾಯಿಕತ್ವವನ್ನು ಉಳಿಸಿ, ಪೋಷಿಸುತ್ತಿರುವ ಬೇನಾಳ ಗ್ರಾಮದ ಸಾಮರಸ್ಯ, ಜ್ಯಾತ್ಯಾತೀತ ಗ್ರಾಮ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಬೇನಾಳ ಆರ್ಎಸ್ ಗ್ರಾಮದಲ್ಲಿ ಸೋಮವಾರ, ರಾಮಣ್ಣ ಮುತ್ಯಾ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾರ ಎತ್ತುವ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ವಿಶೇಷ ಅನುದಾನ ತಂದು ಬೇನಾಳ ಪುನರ್ವಸತಿ ಕೇಂದ್ರಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯ ಕಲ್ಪಿಸುವೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಗ್ರಾಮದ ವತಿಯಿಂದ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ಅತಿ ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಾಧ್ಯಕ್ಷನಾಗಿದ್ದು, ಜವಾಬ್ದಾರಿ ಹೆಚ್ಚಿದ್ದು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ, ಅಭಿಮಾನದ ಸನ್ಮಾನಕ್ಕೆ ನಾನು ಸದಾ ಚಿರರುಣಿ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಸಾಹಿತಿ ಅಶೋಕ ಹಂಚಲಿ, ಕರ್ನಾಟಕ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಮಾತನಾಡಿದರು.
ಜೆಡಿಎಸ್ ಪಕ್ಷದ ಸೋಮನಗೌಡ ಪಾಟೀಲ (ಮನಗೂಳಿ), ಎಸ್.ಜಿ. ನಾಗಠಾಣ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಬುಡ್ಡೆಸಾಬ್ ಬಾಗವಾನ, ಬಸವಂತಪ್ಪ ಬೋರಣ್ಣವರ, ಬಾಲರಾಜ ಭಜಂತ್ರಿ, ಅಮೀನಸಾಬ ಬುರಾನಗೋಳ, ವಿ.ಕೆ. ಪೋತದಾರ, ಜಿ.ಸಿ. ಮುತ್ತಲದಿನ್ನಿ, ಬಿ.ಎಚ್. ಗಣಿ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಬಿ.ಎಸ್. ಪಾಟೀಲ, ತಾರಾಸಿಂಗ ದೊಡಮನಿ ಮತ್ತೀತರರು ಇದ್ದರು.
ಆಲಮಟ್ಟಿ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಚಕ್ಕಡಿಯಲ್ಲಿ ಮೆರವಣಿಗೆ
ಶಿವಾನಂದ ಪಾಟೀಲ, ಎಸ್.ಕೆ. ಬೆಳ್ಳುಬ್ಬಿ, ಸೋಮನಗೌಡ ಪಾಟೀಲ, ಚಂದ್ರಶೇಖರ ನುಗ್ಗಲಿ ಅವರನ್ನು ಚಕ್ಕಡಿಯಲ್ಲಿ ಮೆರವಣಿಗೆ ಮಾಡಿಸಿದ್ದು ವಿಶೇಷ.

