ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನಿರ್ದೇಶಕರ ಅವರ ಜೂನ್ ೨ರ ಪತ್ರದ ಮೇರೆಗೆ ಮುಕ್ತ ಮಾರುಕಟ್ಟೆಯ ಸಗಟುದಾರರಿಗೆ ೩ ಸಾವಿರ ಮ್ಯಾರ್ಟಿಕ್ ಟನ, ರಿಟೇಲರಗಳಿಗೆ ೧೦ ಮೆರ್ಟಿಕ್ ಟನ ಹಾಗೂ ಉತ್ಪಾದಕರಿಗೆ ಅವರ ಉತ್ಪಾದನಾ ಸಾಮರ್ಥದ ಶೇ ೭೦ರಷ್ಟು ಗೋಧಿ ದಾಸ್ತಾನು ಮಿತಿಯನ್ನು ದಿನಾಂಕ ೩೧-೦೩-೨೦೨೬ರವರೆಗೆ ನಿಗದಿ ಪಡಿಸಲಾಗಿದೆ. ಅದರಂತೆ ಜಿಲ್ಲೆಯ ಗೋಧಿ ಸಗಟು ವ್ಯಾಪಾರಸ್ಥರು, ರಿಟೇಲರ್ಸ್ ಹಾಗೂ ಗೋಧಿ ಉತ್ಪಾದನೆ ಮಾಡುವವರು ತಮ್ಮಲಿರುವ ಗೋಧಿ ದಾಸ್ತಾನಿನ ಮಾಹಿತಿಯನ್ನು ತುರ್ತಾಗಿ ಕೇಂದ್ರ ಸರ್ಕಾರದ ವೆಬ್‌ಸೈಟ್https://evegoils.nic.in/wsp/login ನಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಯಾವುದೇ ವ್ಯಾಪಾರಸ್ಥರು ಗೋಧಿ ದಾಸ್ತಾನಿನ ಮಾಹಿತಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳದಿದ್ದರೇ ಅಂತಹವರ ವಿರುದ್ದ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
