ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಸಹೋದರರ ಸಹೋದರಿಯರ ನಡುವೆ ಪ್ರೀತಿ, ವಿಶ್ವಾಸ, ಹಾಗೂ ರಕ್ಷಣೆ ನೀಡುವ ಸಂಕೇತವಾದ ರಕ್ಷಾ ಬಂಧನ ಹಬ್ಬ ಆಚರಿಸಿ ಶಾಲಾ ವಿಧ್ಯಾರ್ಥಿನಿಯರು ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬ ಆಚರಿಸಿದರು.
ತಾಲ್ಲೂಕಿನ ಕನಮಡಿ ಗ್ರಾಮದ ಮಾಣಿಕೇಶ್ವರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಸಹೋದರರ ದೀರ್ಘಾಯುಷ್ಯ, ಪ್ರಗತಿ ಮತ್ತು ಉತ್ತಮ ಆರೋಗ್ಯವನ್ನು ಬಯಸಿ ರಾಖಿ ಕಟ್ಟಿ ಶುಭ ಹಾರೈಸಿದರು.
ಈ ಶುಭ ದಿನದಂದು ಪ್ರತಿ ಮನೆಯಲ್ಲೂ ರಕ್ಷಾ ಬಂಧನ ಹಬ್ಬ ಆಚರಿಸಿ ಸಿಹಿ ತಿನ್ನಿಸಿ ಸಹೋದರತ್ವ ಭಾವ ಗಟ್ಟಿಗೊಳಿಸಿದರು. ಆರತಿ ಬೆಳಗಿ ಹಣೆಗೆ ತಿಲಕ ಇಟ್ಟು ನಂತರ ಉಡುಗೋರೆ ನೀಡಿ ಸಂಭ್ರಮಿಸಿದರು.

