*ಉದಯರಶ್ಮಿ ದಿನಪತ್ರಿಕೆ*
ಬಸವನಬಾಗೇವಾಡಿ: ಎಲ್ಲ ಸಂಪನ್ಮೂಲಗಳಿಂದ ಕೂಡಿದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕೋಶಗಳನ್ನು ರಚಿಸಿ ಪ್ರತಿಯೊಂದು ಕೋಶದ ಅಡಿಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೆಲಸ ಮಾಡುವ ಪದ್ಧತಿ ನಮ್ಮ ಮಹಾವಿದ್ಯಾಲಯದಲ್ಲಿದೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಪ್ರೊ. ಸಿ. ಪಿ ಧಡೇಕರ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹೊಸದಾಗಿ ಪ್ರವೇಶ ಪಡೆದ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ನಿಟ್ಟಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೀಕ್ಷಾರಂಭ (ಒರಿಯೆಂಟೇಶನ್ ಪ್ರೋಗ್ರಾಮ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಹಾವಿದ್ಯಾಲಯದಲ್ಲಿ ಐಕ್ಯೂ ಎಸಿ, ರಿಸರ್ಚ್, ಕಲ್ಚರಲ್, ಟೈಮ್ ಟೇಬಲ್, ಎಸ್ಸಿಎಸ್ಟಿ ಸ್ಕಾಲರ್ಷಿಪ್, ಅಲುಮಿನಿ ಕಮಿಟಿ, ಇಂಟರ್ನಲ್ ಎಕ್ಸಾಮಿನೇಷನ್, ಪೇರೆಂಟ್ಸ್ ಅಂಡ್ ಟೀಚರ್ ಕಮಿಟಿ, ಲೈಬ್ರರಿ, ಸ್ಪೋರ್ಟ್ಸ್, ವಿಮೆನ್ ಎಂಪವರ್ ಮೆಂಟ್ ಪ್ರಿವೆನ್ಷನ್ ಆಫ್ ಸೆಕ್ಸವಲ್ ಕಮಿಟಿ, ಪ್ರೆಸ್ ಅಂಡ್ ಪಬ್ಲಿಸಿಟಿ ಕಮಿಟಿ, ಲ್ಯಾಂಗ್ವೇಜ್ ಫೋರಂ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್ ಅಂಡ್ ರೆಡ್ ರಿಬ್ಬನ್ ಸೆಲ್, ಸ್ಕೌಟ್ಸ್ ಅಂಡ್ ಗೈಡ್ಸ್, ಸ್ಟೂಡೆಂಟ್ ವೆಲ್ಫೇರ್ ಕಮಿಟಿ ಮಹಾವಿದ್ಯಾಲಯದಲ್ಲಿ ಅಸ್ತಿತ್ವದಲ್ಲಿದ್ದ ಕೋಶಗಳ ಕುರಿತು ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರ ಕಾರ್ಯ ಚಟುವಟಿಕೆ ಮತ್ತು ವಿಷಯದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಹಂಚಿಕೊಂಡರು.
ಪ್ರಾಚಾರ್ಯ ಡಾ. ಎ. ವ್ಹಿ. ಸೂರ್ಯವಂಶಿ ಮಾತನಾಡಿ, ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಖ್ಯಾ ಶಾಸ್ತ್ರದ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಎಟಿ, ಸಮಾಜಶಾಸ್ತ್ರದ ಪ್ರಾಧ್ಯಾಪಕ ಡಾ. ವೈ .ಬಿ. ನಾಯಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಎಂ. ಸಾಲವಾಡಗಿ, ದೈಹಿಕ ನಿರ್ದೇಶಕ ಪ್ರೊ. ಎಸ್. ಕೆ. ಚಿಕ್ಕನರ್ತಿ, ಡಾ. ಎಸ್. ಬಿ .ಜನಗೊಂಡ, ಎಮ್. ಕೆ. ಯಾದವ, ಎಸ್. ಜೆ. ಸೂರ್ಯವಂಶಿ, ಪಿ. ಎಸ್. ನಾಟಿಕಾರ, ಜಯರಾಮರೆಡ್ಡಿ, ಆರ್. ಎಮ್ .ಮುಜಾವರ್, ಆರ್. ಎನ್. ರಾಠೋಡ, ವಿ .ಎನ್. ರಜಪೂತ, ಡಾ. ಕಿರಣ್ ಸೂಡಿ, ಹಾಗೂ ಎಲ್ಲ ಬೋಧಕೇತ ಸಿಬ್ಬಂದಿಯವರು ಹಾಜರಿದ್ದರು. ಸಂಜನಾ ಮಠಪತಿ ಪ್ರಾರ್ಥಿಸಿದಳು. ಡಾ .ಶ್ರೀರಾಮ ಬಿಜಾಪುರ ನಿರೂಪಿಸಿದರು
Subscribe to Updates
Get the latest creative news from FooBar about art, design and business.
Related Posts
Add A Comment

