ಬಂದಾಳ ಶಾಲಾ ಮಕ್ಕಳಿಗೆ ಸ್ಕೂಲ ಬ್ಯಾಗ್ ವಿತರಣೆ | ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಕರೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದ ಬಡ ಹಿಂದುಳಿದ ಅನ್ಯಾಯಕ್ಕೊಳಗಾದವರಿಗೆ ಯಾವುದೇ ಧರ್ಮ ಜಾತಿ ತಾರತಮ್ಯವಿಲ್ಲದೆ ಸಹಾಯ ಮಾಡುವ ಸಮಾಜ ಸೇವೆಯ ಮೂಲಕ ಗ್ರಾಮದ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಅಖಿಲ ಭಾರತ ಮಾನವೀಯತೆ ವೇದಿಕೆಯ ಸಂದೇಶ ಎಲ್ಲರಿಗೂ ಸಾರೋಣ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗನಗೌಡ ಎಸ್ ಬಿರಾದಾರ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಗುರುವಾರ ಪಟ್ಟಣದ ಅಖಿಲ ಭಾರತ ಮೌನವೀಯತೆ ಸಂದೇಶ ವೇದಿಕೆ ಸದಸ್ಯರು ಬಡ ನಿರ್ಗತಿಕ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣ ಸಮಾರಂಭದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಮಾಜದ ಸೇವೆಯ ಮೂಲಕ ಸಮಾಜದ ಕೆಳವರ್ಗದ ಜನರ ಮಕ್ಕಳಿಗೆ ಸಹಾಯ ಸಹಕಾರ ಮಾಡುವ ಸಂಸ್ಥೆಯ ಪದಾಧಿಕಾರಿಗಳಿಗೆ ಅನಂತ ಅಭಿನಂದನೆಗಳು ತಿಳಿಸಿದರು.
ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯ ಸದಸ್ಯ ದಾವೂದ ನದ್ವಿ ವಠಾರ ಮಾತನಾಡಿ ಮಾನವೀಯತೆ ಸಂದೇಶ ಚಳವಳಿ ಪ್ರೀತಿಯಿಂದ ಬಾಳೋಣ ಎಂಬ ಕನಸು ಕಂಡವರು ಮೌಲಾನಾ ಸಯ್ಯದ್ ಅಬುಲ್ ಹಸನ ಅಲಿ ನದ್ವಿ (ಅಲಿಮಿಞಾ) ಸಂಸ್ಥಾಪಕರು ನೀಡಿರುವ ಸಂದೇಶ ಪರಸ್ವರ ಗೌರವ ಶಾಂತಿಯುತ ಸಹಬಾಳ್ವೆ ಮಾನವೀಯ ಮೌಲ್ಯಗಳ ಸಾಮರಸ್ಯದ ಆದಾರದ ಮೇಲೆ ಸಮಾಜ ಉತ್ತಮ ಕನಸು ಕಟ್ಟಿಕೊಂಡು ಇಂದು ಅವರ ಪ್ರೇರಣೆಯ ಮೂಲಕ ಸಮಾಜ ಸೇವೆ ಮಾಡಲು ವೇದಿಕೆ ಮುಂದಾಗಿದೆ ಎಂದರು.
ಎಸ್ ಡಿ ಎಂ ಸಿ ಸದಸ್ಯ ನಭಿರುಸುಲ್ ಬೆಕಿನಾಳ .ಶಾಲಾ ಮುಖ್ಯಗುರು ನಿಂಗನಗೌಡ ಪಾಟೀಲ. ಮೌಲಾನಾ ಕಲಿಮುಲ್ಲಾ ನದ್ವಿ . ಮೌ.ಇಸ್ಮಾಯಿಲ್ ನದ್ವಿ . ಇಬ್ರಾಹೀಮ ಹುಮನಬಾದ ಮುಸಾ ನದ್ವಿ ವೇದಿಕೆಯ ಮೇಲೆ ಇದ್ದರು.
ಶಾಲಾ ಸರ್ವ ಶಿಕ್ಷಕರು ಹಾಗೂ ಅಪಾರ ವಿದ್ಯಾರ್ಥಿಗಳು ಇದ್ದರು.
ಶಿಕ್ಷಕ ಶಿವಶರಣ ಕಂಟಿಗೊಂಡ ಪ್ರಾರ್ಥಿಸಿದರು. ಶಿಕ್ಷಕ ಭಾಗ್ಯೇಶ ಗೋಲಗೇರಿ ಸ್ವಾಗತಿಸಿದರು.ಹಿರಿಯ ಶಿಕ್ಷಕ ಚಂದ್ರಶೇಖರ ಬೂಯ್ಯಾರ ವಂದಿಸಿದರು. ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ನಿರೂಪಿಸಿದರು.

