ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತಹಶೀಲ್ದಾರ್ ಎಸ್.ಎಸ್. ನಾಯಕಲಮಠ ನೇತೃತ್ವದಲ್ಲಿ ಗುರುವಾರ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ತಾಲೂಕ ಆಡಳಿತದಿಂದ ಶಿಷ್ಟಾಚಾರದ ಪ್ರಕಾರವಾಗಿ ಅತ್ಯಂತ ಅಚ್ಚುಕಟ್ಟಾಗಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವ ಕುರಿತು ಸುದಿರ್ಘವಾಗಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಕಟ್ಟುವುದು ಎಂ.ಪಿ.ಎಸ್ ಶಾಲೆಗೆ, ನಿರೂಪಣೆ ಕೆ.ಜಿ.ಎಸ್ ಶಾಲೆಗೆ ವಹಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲು ಎಪಿಜೆ ಅಬ್ದುಲ್ ಕಲಾಂ ಆಂಗ್ಲ ಮಾದ್ಯಮ ಶಾಲೆ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸಂಗಮೇಶ್ವರ ಶಾಲೆ, ಎಂ.ಪಿ.ಎಸ್ ಶಾಲೆ ಹಾಗೂ ಇಕ್ರಾ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಹಿಸುವುದರ ಜೊತೆಗೆ ತಾಲೂಕ ಮಟ್ಟದ ವಿವಿಧ ಇಲಾಖೆಗಳಿಗೆ ಇನ್ನಿತರ ಜವಾಬ್ದಾರಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಸಿ.ಎಸ್ ಗಿಡ್ಡಪ್ಪಗೋಳ, ತಾ ಪಂ ಇಓ ಸುನಿಲ್ ಮದ್ದಿನ್, ಪ.ಪಂ ಮುಖ್ಯಾದಿಕಾರಿ ವಿರೇಶ ಹಟ್ಟಿ, ಪಿಎಸ್ಐ ಆರ್.ಹೆಚ್ ಹಳ್ಳಿ, ವೖದ್ಯಾಧಿಕಾರಿ ಡಾ.ಲಕ್ಷ್ಮೀ ತೆಲ್ಲೂರ, ಪಟ್ಟಣದ ಹಿರಿಯರಾದ ಉಸ್ಮಾನಪಟೇಲ್ ಖಾನ್, ಪ.ಪಂ ಸದಸ್ಯರಾದ ಮಹಾಂತೇಶ ಗಿಡ್ಡಪ್ಪಗೋಳ, ಬಾಬು ಬಜಂತ್ರಿ, ತೌಸಿಪ್ ಗಿರಗಾವ, ದಸ್ತಗೀರ ಕಲಾದಗಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜು ಮುಖ್ಯಸ್ಥರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಇನ್ನಿತರರು ಇದ್ದರು.

