ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಹೆಣ್ಣು ಮಕ್ಕಳು ಉಳಿಸುವ ಹಣದಿಂದ ಮದುವೆಗೆ, ಮಕ್ಕಳ ಶಿಕ್ಷಣಕ್ಕೆ ಅಥವಾ ಮನೆಯನ್ನ ಮುನ್ನಡೆಸಲು ತುಂಬಾ ಸಹಕಾರಿ ಆಗುತ್ತದೆ ಉಳಿತಾಯದ ಬಗ್ಗೆ ಅರಿವು ಹೊಂದಿದರೆ, ಅವರು ಅವರ ಜೀವನದಲ್ಲಿ ಆರ್ಥಿಕವಾಗಿ ಸ್ವಾವಲಂಬಿ ಆಗಬಹುದು ಎಂದು ಚಿತ್ರನಟಿ ಶೃತಿ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರ ನೂತನ ಸುಶೀಲವರ್ದಿನಿ ಮಹಿಳಾ ಕೋ- ಆಪರೇಟಿವ್ ಸೊಸೈಟಿ ಉದ್ಘಾಟಸಿ ಮಾತನಾಡಿದ ಅವರು, ಇಂದಿನ ಈ ಸೊಸೈಟಿಯು ಮಹಿಳೆಯರ ಸಬಲೀಕರಣ ಮತ್ತು ಅಭ್ಯುದಯಕ್ಕೆ ಕಾರಣವಾಗುತ್ತದೆ ಈ ಕನಸು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರದಾಗಿತ್ತು ಎಲ್ಲ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಪ್ರತಿಯೊಬ್ಬ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನ ತಗೆದು ಹಣವನ್ನ ಉಳಿಸಬೇಕು. ಹಾಗೆ ಉಳಿಸಿದ ಹಣ ನಿಮ್ಮ ಇಡೀ ಕುಟುಂಬವನ್ನೇ ಸಲಹುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಸಮಾಜಕ್ಕೆ ಕೊಡುಗೆ ನೀಡಿದ ಮಹನಿಯರನ್ನು ಗೌರವಿಸುವುದು, ಸನ್ಮಾನಿಸುವುದು ಸಮಾಜದ ಕರ್ತವ್ಯ ಎಂದು ತಿಳಿಸಿದರು.
ಜ್ಯೋತಿ ಬೆಳಗಿಸಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಮಾತನಾಡಿ ಇಂದು ಕೊಲ್ಹಾರದಲ್ಲಿ ಮಹತ್ತರ ಹೆಜ್ಜೆಯನ್ನು ಇಡುವತ್ತ ನೀವೆಲ್ಲರೂ ಸೇರಿದ್ದೀರಿ. ಒಬ್ಬ ಮಹಿಳೆ ಆರ್ಥಿಕವಾಗಿ ಸಬಲಳಾದರೇ ಇಡೀ ಜಗ್ಗತ್ತೆ ಅಭಿವೃದ್ಧಿ ಆದಂತೆ. ಈ ಸುಶೀಲವರ್ದಿನಿ ಮಹಿಳಾ ಕೋ- ಆಪರೇಟಿವ್ ಸೊಸೈಟಿ ಕರ್ನಾಟಕದ ತುಂಬ ತನ್ನ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.
ವಯನಾಡು ಓವರಸಿಸ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವಿಜಯಲಕ್ಷ್ಮಿ ವಿಜಯ್ ರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶದಿಂದೆ ಈ ಸೊಸೈಟಿ ಉಪಯೋಗ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಮಠದ ಕೖಲಾಸನಾಥ ಸ್ವಾಮಿಜಿಗಳು, ಸಿ.ಎಂ ಗಣಕುಮಾರ, ಸಂಗಪ್ಪ ಬಾಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರಲಿಂಗಪ್ಪ ಅಂಗಡಿ, ಶಾಂತಗೌಡ ಪಾಟೀಲ್, ಸೊಸೈಟಿ ಅಧ್ಯಕ್ಷರಾದ ಸವಿತಾ ಬೆಳ್ಳುಬ್ಬಿ, ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ, ರಾಜಶೇಖರ ಶೀಲವಂತ, ಉಮಾ ಲಿಂಬಿಕಾಯಿ, ಚಿನ್ನಪ್ಪ ಗಿಡ್ಡಪ್ಪಗೋಳ, ಬಾಬು ಬಜಂತ್ರಿ, ಅಪ್ಪಾಸಿ ಮಟ್ಯಾಳ, ಶ್ರೀಶೈಲ ಅಥಣಿ, ಗುರು ಚಲವಾದಿ, ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಸೀಲ್ದಾರ್, ಪಿ.ಕೆ. ಗಿರಗಾಂವಿ ಹಾಗೂ ಇನ್ನಿತರರು ಇದ್ದರು.
ಕವಿತಾ ಮುದಕವಿ, ರವಿ ಬಾಟಿ ಕಾರ್ಯಕ್ರಮ ನಿರೂಪಿಸಿದರು, ವಂದಿಸಿದರು.

