ಉದಯರಶ್ಮಿ ದಿನಪತ್ರಿಕೆ
ಚಡಚಣ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಆ.೦೬ ರಂದು ಬುಧವಾರ ಬೆಂಗಳೂರಿನಲ್ಲಿ ಆಯೋಜಿಸಲಾದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ, ಚಡಚಣ ತಾಲೂಕಿನ ಹಾಲಹಳ್ಳಿಯ ನಿಲಯ ಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಹುಬ್ಬಳ್ಳಿ ಅವರಿಗೆ `’ಅತ್ಯುತ್ತಮ ನಿಲಯ ಪಾಲಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಯನ್ನು ರಾಜ್ಯದ ವಸತಿ ಮತ್ತು ವಕ್ಫ್ ಇಲಾಖೆಯ ಸಚಿವರಾದ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಲ್ಲಿಕಾರ್ಜುನ ಹುಬ್ಬಳ್ಳಿ ಅವರು ನೈತಿಕತೆ, ಶಿಸ್ತು, ವಿದ್ಯಾರ್ಥಿ ಹಿತಪಾಲನೆ ಹಾಗೂ ನೈಜ ಸೇವಾಭಾವದಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದು, ಇದೇ ನಿಷ್ಠವಂತ ಕೆಲಸಗಳು ಅವರು ಈ ಗೌರವಕ್ಕೆ ಪಾತ್ರರಾಗಲು ಕಾರಣವಾಗಿದೆ.
ಈ ಸಾಧನೆಗೆ ಹಾಲಹಳ್ಳಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಕುಮಾರ ಕಾಂಬಳೆ,ಮೋಹನಕುಮಾರ ದಿಬ್ಬದಳ್ಳಿ, ಜಿ.ಎಸ್. ಬನಸೋಡೆ, ಅಪ್ಪಾಸಾಹೇಬ ಅಂಕುಶ, ಸುನೀಲ ಅಗಸರ, ಸಂಗಮೇಶ ಹಿಟ್ನಳ್ಳಿ, ಗಿರೀಶ ಕಾಂಬಳೆ, ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹೃದಯಪೂರ್ವಕವಾಗಿ ಪ್ರಶಸ್ತಿ ವೀಜೆತ ಮಲ್ಲಿಕಾರ್ಜುನ ಹುಬ್ಬಳ್ಳಿ ಅವರಿಗೆ ಗುರುವಾರ ಅಭಿನಂದನೆ ಸಲ್ಲಿಸಿದ್ದಾರೆ.

