ಉದಯರಶ್ಮಿ ದಿನಪತ್ರಿಕೆ
ಝಳಕಿ: ಇಲ್ಲಿನ ಪೊಲೀಸ್ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ಬಂದ ಪಿಎಸ್‌ಐ ಮಂಜುನಾಥ ತಿರಕನವರ ಇವರನ್ನು ಕ.ರ.ವೇ ತಾಲೂಕಾ ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರರವರ ನೇತೃತ್ವದಲ್ಲಿ ಶಾಲು ಹೊಂದಿಸಿ ಹೂಗುಚ್ಛವನ್ನು ನೀಡುವ ಮೂಲಕ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಕ.ರವೇ ವಲಯ ಅಧ್ಯಕ್ಷರಾದ ರವಿಕುಮಾರ ಹೂಗಾರ, ಸಂತೋಷ ನಾವಿ, ನಿರಂಜನ ಪೂಜಾರಿ, ಹರೀಶ ಶೆಟ್ಟಿ, ಪಿಂಟು ಬಿರಾದಾರ, ಬಾಲಕೃಷ್ಣ ಭೋಸಲೆ, ಮಲ್ಲಿಕಾರ್ಜುನ ಬನಸೋಡೆ, ಅಮೋಘ ಢಾಳೆಯವರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.