ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕಡ್ಲಿಗರ ಹುಣ್ಣಿಮೆಯಂದು ಕಡಲಿಗೆ ಒಡಲು ತುಂಬುವುದು ಸಂಪ್ರದಾಯ. ಅದಕ್ಕಾಗಿ ಗುರುವಾರ, ರೈತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಬೆಳಿಗ್ಗೆಯಿಂದಲೇ ಹಲವು ಮಹಿಳೆಯರು ಆಗಮಿಸಿ ಕೃಷ್ಣಾ ನದಿಗೆ ಉಡಿ ತುಂಬಿ, ಕೃಷ್ಣೆಗೆ ಅರ್ಪಿಸಿದರು.
ಬಾಗಿನ ಅರ್ಪಿಸಿದ ಬಳಬಟ್ಟಿ ರೈತರು;
ಗುರುವಾರ ಸಂಜೆ ಬಳಬಟ್ಟಿ ಗ್ರಾಮದ ಹಲವು ರೈತರು ಸೇರಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮೊದಲೆಲ್ಲಾ ಪ್ರತಿ ವರ್ಷ ಕಡ್ಲಿಗರ ಹುಣ್ಣಿಮೆಯಂದೇ ಸರ್ಕಾರ ಬಾಗಿನ ಅರ್ಪಿಸಲಿ ಬಿಡಲಿ, ರೈತರು ಮಾತ್ರ ಎಲ್ಲರೂ ಸೇರಿ ಬಾಗಿನ ಅರ್ಪಿಸುತ್ತಿದ್ದರು.
ಈಗ ಜಲಾಶಯ ಪೂರ್ತಿಯಾದ ಮೇಲೆ ಬಾಗಿನ ಅರ್ಪಿಸುವ ಸಂಪ್ರದಾಯ ಹೆಚ್ಚಿದೆ.
ಆದರೆ ಇದಕ್ಕೆ ಅಪವಾದ ಎಂಬಂತೆ ಗುರುವಾರ, ನಿಡಗುಂದಿ ತಾಲ್ಲೂಕಿನ ಬಳಬಟ್ಟಿ ಗ್ರಾಮದ ರೈತರು ಕೃಷ್ಣೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ನದಿಯೊಳಗೆ ತೆರಳಿ ಬಾಗಿನ ಅರ್ಪಿಸಿದರು.
ವೈ.ಎಲ್. ಗಣಿ, ಎಸ್.ಕೆ. ಹುಗ್ಗಿ,ವೈ.ಕೆ. ಮಾಡಿಗೊಂಡ, ಎಂ.ಎನ್. ತುಪ್ಪದ, ಎನ್.ಎಸ್. ವಿಭೂತಿಮಠ, ಎನ್.ಡಿ. ವಾಲಿಕಾರ, ಎಸ್.ವೈ. ಮಾಳಗೊಂಡ, ಎಸ್.ಬಿ. ಕುಮಟಗಿ, ಬಿ.ಎಲ್. ತೋಳಮಟ್ಟಿ, ಪಿ.ಬಿ. ಹುಗ್ಗಿ, ಸುನಿಲ ಮಜ್ಜಗಿ, ಮಹಾಂತೇಶ ಹಿರೇಮಠ, ಎಸ್.ಕೆ. ಹುಗ್ಗಿ ಮತ್ತೀತರರು ಇದ್ದರು.