ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವಣ್ಣನವರ ನಾಡು, ಶರಣರ ನಾಡು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶರಣರಲ್ಲಿ ಅತಿ ನಿಷ್ಠಾವಂತ ಶರಣರಾಗಿದ್ದವರು ಹಡಪದ ಅಪ್ಪಣ್ಣನವರು. ಅವರ ಕಾಯಕ ಬದುಕು ಮತ್ತು ಅವರ ವಚನಗಳ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ 891 ನೇ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಪ್ಪಣ್ಣನವರು ನಿಜ ಸುಖಿ ಶರಣರು 250 ಕ್ಕೂ ಹೆಚ್ಚು ವಚನಗಳು ರಚಿಸಿದ್ದಾರೆ. ಕಾಯಕದಲ್ಲಿ ನಿಷ್ಠಾವಂತ ಶರಣರು ಕಾಯಕದಲ್ಲಿ ದೇವರನ್ನು ಕಂಡವರು, ಇದರ ಜೊತೆಗೆ ಕಾಯಕ ಮಾಡಿ ಶರಣರಿಗೆ ದಾಸೋಹ ನೀಡಿದವರು ಅಂತಹ ಶರಣರಲ್ಲಿ ಇವರೊಬ್ಬರು ಎಂದರು.
ಸಮಾಜದ ಮುಖಂಡ ಶಿವಲಿಂಗಪ್ಪ ತಳೇವಾಡ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಮುಂಖಂಡರಾದ ಮುದಿಯಪ್ಪ ಹಡಪದ, ಶೇಕಪ್ಪ ಹಡಪದ, ಸಂಗಪ್ಪ ಹಡಪದ, ಅರ್ಜುನ ಹಡಪದ, ಕಾಂತು ಹಡಪದ, ಬಸು ಹಡಪದ, ಭೀಮಸಿ ಹಡಪದ, ಶಿವಾನಂದ ಹಡಪದ, ಲಕ್ಷಮಣ್ಣ ಹಡಪದ, ಶಿವು ಹಡಪದ, ಹಾಗೂ ಕಚೇರಿ ಸಿಬ್ಬಂದಿ ಬಿ.ಎನ್. ಜಿಡ್ಡಿಮನಿ, ಪಿ.ಎಸ್. ಹುಡೆ, ಎಂ.ಎಸ್. ಗುತ್ತರಿಗಿ ಇತರರು ಭಾಗವಹಿಸಿದ್ದರು. ಶಿರಸ್ತೇದಾರರಾದ ಕೃಷ್ಣಾ ಗುಡೂರ ನಿರೂಪಿಸಿ ವಂದಿಸಿದರು.