ದಿನಗೂಲಿ ನೌಕರರ ಬಿಲ್ ಪಾವತಿಸಲು ಹಣದ ಬೇಡಿಕೆ ಆರೋಪ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ದಿನಗೂಲಿ ನೌಕರರ ಬಿಲ್ ಪಾವತಿಸಲು ಗ್ರಾಮ ಪಂಚಾಯತ್ ನ ಅಧಿಕಾರಿಗಳು ಹಣದ ಬೇಡಿಕೆ ಇರಿಸಿದ್ದಾರೆಂದು ಆರೋಪಿಸಿ, ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹುಲ್ಲೂರು ಗ್ರಾಮ ಪಂಚಾಯತ ಸದಸ್ಯ ಶಿವಾನಂದ ಲಮಾಣಿ ಇಲ್ಲಿನ ತಾಲೂಕು ಪಂಚಾಯತ ಕಾರ್ಯಾಲಯದ ಆವರಣದಲ್ಲಿ ದಿಢೀರ ಏಕಾಂಗಿ ಧರಣಿ ಆರಂಭಿಸಿದರು.
ಈ ಕುರಿತು ’ಉದಯರಶ್ಮಿ’ಯೊಂದಿಗೆ ಧರಣಿ ನಿರತ ಶಿವಾನಂದ ಮಾತನಾಡಿ, ತಾಲ್ಲೂಕಿನ ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಎಮ್.ಜಿ.ಎನ್.ಆರ್.ಜಿ ಬಿಲ್ ಪಾವತಿಸಿಲ್ಲ. ತಾಲ್ಲೂಕು ಪಂಚಾಯತ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿಯೊಂದು ಕೆಲಸಕ್ಕೆ ಸಮತಿಂಗ ನೀಡಿದರೆ ಅಷ್ಟೇ ಬಿಲ್ ಪಾವತಿ. ಇಲ್ಲಂದರೆ ಕ್ಯಾರೆ ಅನ್ನೋದಿಲ್ಲ ಇಲ್ಲಿನ ಅಧಿಕಾರಿಗಳು. ಕೆಲವು ದಿನಗಳ ಹಿಂದೆ ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು ೪೦ ದಿನಗೂಲಿ ನೌಕರರು ಕೆಲಸ ನಿರ್ವಹಣೆ ಮಾಡಿದ್ದು, ಅವರ ಬಿಲ್ ಪಾವತಿಸಲು ಫೋನ್ ಕರೆ ಮೂಲಕ. ಜೆ.ಇ ಉಮೇಶ ಕನ್ನಿ ಇವರಿಗೆ ಮಾತನಾಡಿದರೆ ಹಾರಿಕೆ ಉತ್ತರ ನೀಡಿ ಜಾರಿಕೊಂಡರು. ಜು೪ ರಂದು ಕಾಮಗಾರಿ ದಿನಾಂಕ ಮುಕ್ತವಾಗಿ ೫-೬ ರಂದು ಬಿಲ್ ಪಾವತಿಸಲು ಮೇಲಾಧಿಕಾರಿಗಳು ನಿರ್ದೇಶನ ನೀಡಿದರೂ ಕೂಡಾ ಬಿಲ್ ಪಾವತಿಸಿಲ್ಲ. ಕಾರಣ ಇವರ ನಡೆಯನ್ನು ಖಂಡಿಸಿ ಇವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಸರಕಾರದ ಸುತ್ತಲೆ ಪ್ರಕಾರ ದಿನಗೂಲಿ ಕೂಲಿಕಾರ ಬಿಲ್ ಪಾವತಿಸಲು ದಿನಾಂಕ ಮುಕ್ತವಾದ ಎರಡು ಮೂರು ದಿನಗಳಲ್ಲಿ ಬಿಲ್‌ಪಾವತಿಸಲು ಆದೇಶವಿದ್ದರೂ ಕೂಡಾ ಇಲ್ಲಿನ ಜೆ.ಇ ಉಮೇಶ ಕನ್ನಿ, ತಾಲ್ಲೂಕ ಸಂಯೋಜಕ ಶಂಕರಗೌಡ ಯಾಳವಾರ ಎಮ್.ಆಯ್.ಎಸ್ ಮಾಡಲು ಉದ್ದೇಶ ಪೂರ್ವಕವಾಗಿ ನಿರಾಕರಿಸಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು ಇವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.