ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉಪತಹಸೀಲ್ದಾರ ಬಿ.ಆರ್.ಪೋಲೇಶಿ ಅವರು ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಹಡಪದ ಸಮಾಜದ ಮುಖಂಡರಾದ ಗುರುಲಿಂಗ ಹಡಪದ ಅವರು ಹಡಪದ ಅಪ್ಪಣ್ಣವರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹಡಪದ ಸಮಾಜ ತಾಲೂಕಾಧ್ಯಕ್ಷ ಮಹಾಂತೇಶ ಹಡಪದ, ಕಾರ್ಯದರ್ಶಿ ಬಸವರಾಜ ಕೋರವಾರ, ನಾಗೇಶ ನಾಗೂರ, ಶಿವಾನಂದ ಬಳವಾಟ, ಶಿವಾನಂದ ಹಡಪದ, ಬಸವರಾಜ ಮುತ್ತಗಿ, ಮಲ್ಲು ಇವಣಗಿ, ಕಿರಣ ನಾಗೂರ, ರಾಚಪ್ಪ ಹಡಪದ, ಚನ್ನು ಹಡಪದ, ಮಹೇಶ ನಾಗೂರ, ಸಾತಪ್ಪ ಹಳ್ಳಿ, ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಇತರರು ಇದ್ದರು.