ಉದಯರಶ್ಮಿ ದಿನಪತ್ರಿಕೆ
ಚಡಚಣ: ಭೀಮರಾಯ ರುದ್ರಗೌಡ ಬಿರಾದಾರ ಸಾ.ಏಳಗಿ ಇವರಿಗೆ ಮಂಗಳೂರು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ (NITK), ಸುರತ್ಕಲ್, ವತಿಯಿಂದ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ಸಮೀಪದ ಏಳಗಿ(ಪಿ.ಎಚ್) ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಡಾ.ಭೀಮರಾಯ ಬಿರಾದಾರ ಅವರು ಭೌತಶಾಸ್ತ್ರ ವಿಷಯದಲ್ಲಿ ಕಾರ್ಬೋನೆಸಿಯಸ್ ಮಟೀರಿಯಲ್ಸ್ ಮೆಟಲ್ ಆಕ್ಸೈಡ್ ಕ್ಲಸ್ಟರ್ ಬೆಸಡ ಎಲೆಕ್ಕ್ಟ್ರೊಡ್ ಮಟೀರಿಯಲ್ಸ್ ಫಾರ್ ಎನರ್ಜಿ ಆಂಡ್ ಸೆನ್ಸಿಂಗ್ ಅಪ್ಲಿಕೇಶನ್ಸ ಎಂಬ ಭೌತಶಾಸ್ತ್ರ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಲಭಿಸಿದೆ. ಈ ಪ್ರಬಂಧಕ್ಕೆ ಡಾ. ಪಾರ್ಥ ಪ್ರತಿಮಾದಾಸ್, ಭೌತಶಾಸ್ತ್ರ ಪ್ರಾಧ್ಯಾಪಕರು ಮಾರ್ಗದರ್ಶನ ಮಾಡಿದ್ದಾರೆ.

