Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಬಡ್ತಿ ಭಾಗ್ಯಕ್ಕೆ ಮೋಕ್ಷ

ಅಭಿವೃದ್ಧಿಯೇ ನನ್ನ ಮೂಲ ಮಂತ್ರ :ಶಾಸಕ ಮನಗೂಳಿ

ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮುದ್ದೇಬಿಹಾಳ: ಜು.೨೬ರಂದು ಪತ್ರಿಕಾ ದಿನಾಚರಣೆ & ಪ್ರಶಸ್ತಿ ಪ್ರದಾನ
(ರಾಜ್ಯ ) ಜಿಲ್ಲೆ

ಮುದ್ದೇಬಿಹಾಳ: ಜು.೨೬ರಂದು ಪತ್ರಿಕಾ ದಿನಾಚರಣೆ & ಪ್ರಶಸ್ತಿ ಪ್ರದಾನ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಜು.೨೬ರಂದು ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತಗಿರಿಯಲ್ಲಿ ಸರ್ಕಾರದಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಸೌಲಭ್ಯ ಜಾರಿಗೊಳ್ಳಲು ಶ್ರಮಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ, ತಾಲೂಕು ಮಟ್ಟದ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.
ಈ ಕುರಿತು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅಂದು ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಗುವ ಸಮಾರಂಭದಲ್ಲಿ ಪಿಯುಸಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಮೌಲ್ಯ, ಪತ್ರಕರ್ತರ ಕರ್ತವ್ಯ ಸೇರಿ ಹಲವು ವಿಷಯಗಳನ್ನು ತಿಳಿಸಿಕೊಡಲು ವಿಶೇಷ ಉಪನ್ಯಾಸ ಏರ್ಪಡಿಸಲು, ತಾಲೂಕಿನ ಸಂಘದ ಐವರು ಪತ್ರಕರ್ತರಿಗೆ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಲು ಸಭೆಯಲ್ಲಿ ಎಲ್ಲರೂ ಒಪ್ಪಿಗೆ ನೀಡಿದರು.
ಇದೇ ಸಮಾರಂಭದಲ್ಲಿ ಕೆಯುಡಬ್ಲುಜೆ ಜಿಲ್ಲಾ ನೂತನ ಅಧ್ಯಕ್ಷ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲು ಮತ್ತು ಜಿಲ್ಲೆಯ ಎಲ್ಲ ಪದಾಧಿಕಾರಿಗಳನ್ನು ಆಹ್ವಾನಿಸಲು ಸಭೆ ಒಪ್ಪಿಗೆ ಸೂಚಿಸಿತು.
ಇದೇ ವೇಳೆ ಹಿರಿಯ ಪತ್ರಕರ್ತ, ಕೆಯುಡಬ್ಲುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ವಡವಡಗಿ ಅವರು ಸಮಾರಂಭದ ರೂಪುರೇಷೆ ಕುರಿತು ಮಾತನಾಡಿದರು.
ಸಂಘದ ತಾಲೂಕು ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್, ಸಂಘದ ಮಾಜಿ ಅಧ್ಯಕ್ಷ ಎಚ್.ಆರ್.ಬಾಗವಾನ, ಅಮೀನಸಾಬ ಮುಲ್ಲಾ, ಸದಸ್ಯರಾದ ನೂರೇನಬಿ ನದಾಫ, ಬಂದೇನವಾಜ್ ಕುಮಸಿ, ಬಸವರಾಜ ಕುಂಬಾರ, ಸಾಗರ ಉಕ್ಕಲಿ, ಪುಂಡಲೀಕ ಮುರಾಳ, ಮಕ್ಬುಲ್ ಬನ್ನೆಟ್ಟಿ, ಹಣಮಂತ ಬೀರಗೊಂಡ, ಮುತ್ತು ಬೀರಗೊಂಡ, ಗುರುರಾಜ ಪತ್ತಾರ, ಕೃಷ್ಣಾ ಕುಂಬಾರ, ಸೂರಜ್ ರಿಸಾಲ್ದಾರ್, ಈಶ್ವರ ಈಳಗೇರ, ನಾಗೇಂದ್ರ ಶಿವಶಿಂಪಿ ಮತ್ತೀತರರು ಭಾಗಿಯಾಗಿ ಸಲಹೆ ಸೂಚನೆ ನೀಡಿದರು.

ಜಿಲ್ಲಾ ಪ್ರಶಸ್ತಿಗೆ ಆಯ್ಕೆ

ಸಂಘದ ಹಿರಿಯ ಸದಸ್ಯ ನೂರೇನಬಿ ನದಾಫ ಅವರನ್ನು ಚೀಟಿ ಎತ್ತುವ ಮೂಲಕ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕವು ವಿಜಯಪುರದಲ್ಲಿ ಜು.೧೯ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ತಾಲೂಕು ಪ್ರಶಸ್ತಿಗೆ ಐವರ ಆಯ್ಕೆ

ಯುವ ಪತ್ರಕರ್ತರಾದ ಹಣಮಂತ ಬೀರಗೊಂಡ(ಢವಳಗಿ), ರಿಯಾಜ್ ಮುಲ್ಲಾ, ಮುತ್ತು ಟಕ್ಕಳಕಿ, ಈಶ್ವರ ಈಳಗೇರ(ರೂಢಗಿ) ಮತ್ತು ಕೃಷ್ಣಾ ಕುಂಬಾರ ಅವರನ್ನು ತಾಲೂಕು ಮಟ್ಟದ ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜು.೨೬ರಂದು ನಡೆಯಲಿರುವ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಬಡ್ತಿ ಭಾಗ್ಯಕ್ಕೆ ಮೋಕ್ಷ

ಅಭಿವೃದ್ಧಿಯೇ ನನ್ನ ಮೂಲ ಮಂತ್ರ :ಶಾಸಕ ಮನಗೂಳಿ

ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ

ಗರತಿಯ ಹಾಡುಗಳು ಮಾಯವಾಗುತ್ತಿರುವುದು ಕಳವಳಕಾರಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ೪ ವರ್ಷಗಳಿಂದ ನೆನೆಗುದಿಗೆ ಬಿದ್ದ ಬಡ್ತಿ ಭಾಗ್ಯಕ್ಕೆ ಮೋಕ್ಷ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿಯೇ ನನ್ನ ಮೂಲ ಮಂತ್ರ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಗರತಿಯ ಹಾಡುಗಳು ಮಾಯವಾಗುತ್ತಿರುವುದು ಕಳವಳಕಾರಿ
    In (ರಾಜ್ಯ ) ಜಿಲ್ಲೆ
  • ಎಕ್ಸಲಂಟ್ ಸಂಸ್ಥೆಯಿಂದ ೨೯ ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಸಾಂಸ್ಕೃತಿಕ ಕಲರವ, ಚಿಣ್ಣರ ಕುಣಿತ ಸಭಿಕರ ನಲಿತ
    In (ರಾಜ್ಯ ) ಜಿಲ್ಲೆ
  • ಜಾಹೀರಾತು ನೀತಿ–೨೦೨೬ ವಿರುದ್ಧ ಸ್ಥಳಿಯ ಪತ್ರಿಕೆಗಳ ಆಕ್ರೋಶ!
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ ಮಾ.೧೮ ರ ಇಂಗ್ಲೀಷ ಪರೀಕ್ಷೆಪ್ರಶ್ನೆಯ ಉತ್ತರದಲ್ಲಿ ಗೊಂದಲ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ವ್ಯತ್ಯಯತುರ್ತು ಸೇವಾ ಕೇಂದ್ರ ಸಂಪರ್ಕಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಮಾ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.