ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಚ್ಚಿನ ಮಳೆ-ಗಾಳಿಯ ರಭಸಕ್ಕೆ ವಿದ್ಯುತ್ ಮೂಲಭೂತ ಸಲಕರಣೆಗಳು, ವಿದ್ಯುತ್ ಕಂಬಗಳು ಹಾಗೂ ತಂತಿಗಳು ತುಂಡಾಗಿ ಹರಿದು ಬಿದ್ದು, ಹಾನಿಯನ್ನುಂಟು ಮಾಡುವ ಸಂಭವವಿರುವುದರಿಂದ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ಹೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸುವ ಮೂಲಕ ಜೀವಹಾನಿಯನ್ನು ತಪ್ಪಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಸ್ಥಾಪಿಸಲಾದ ಉಚಿತ ಸಹಾಯವಾಣಿ ಸಂಖ್ಯೆ ೧೯೧೨, ಗ್ರಾಹಕರ ದೂರು ಕೇಂದ್ರದ ದೂರವಾಣಿ ಸಂಖ್ಯೆ:೦೮೩೫೨-೨೭೬೯೪೦ ಮೊ:೯೪೮೦೮೮೨೬೯೦, ನಗರ ಉಪ ವಿಭಾಗ-೨ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೊ: ೯೪೪೮೩೭೫೭೧೧ಸಂಪರ್ಕಿಸಬಹುದಾಗಿದೆ.
ವಿಜಯಪುರದ ಶಾಖೆ ನಂ.೦೩ರ ಶಾಖಾಧಿಕಾರಿ ನವೀನಕುಮಾರ ಮೊ:೯೪೮೦೮೮೨೬೩೫, ಶಾಖೆ ನಂಬರ್ ೦೪ರ ಶಾಖಾಧಿಕಾರಿ ಅಮಿತ್ ದಿನ್ನಿ ಮೊ: ೯೪೮೦೮೮೨೬೩೬, ಗೋಲಗುಂಬಜ್ ವ್ಯಾಪ್ತಿಯ ಶಾಖಾಧಿಕಾರಿ ಶ್ರೀಮತಿ ಫರೀಜಾ ಖಾನ್ ಮೊ;೯೪೮೦೮೮೨೬೭೬ ಹಾಗೂ ನಗರದ ನವರಸಪುರ ಶಾಖೆಯ ಶಾಖಾಧಿಕಾರಿ ಶಹಬಾಜ್ ಪಟೇಲ ಮೊ: ೯೪೮೦೮೮೨೬೮೧ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಹೆಸ್ಕಾಂನ ವಿಜಯಪುರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
