ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಡಾ ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ ಅವರು ಸಮಾಜ ಕಲ್ಯಾಣ ಇಲಾಖೆಗೆ ಬರುವ ಫಲಾನುಭವಿಗಳಿಗೆ ಮಾಹಿತಿಗಳನ್ನು ಸರಿಯಾಗಿ ನೀಡದೆ ಅಧಿಕಾರದ ದರ್ಪ ಮೆರೆಯುತ್ತಿದ್ದು, ಕೂಡಲೇ ಇವರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರಣು ಎಸ್. ಜಮಖಂಡಿ ಮಾತನಾಡಿ, ದೇವರ ಹಿಪ್ಪರಗಿಯ ರಮೇಶ ತಂ.ಮಡಿವಾಳಪ್ಪ ಮಲ್ಲಾರಿ ಅವರಿಗೆ ಅಂಬೇಡ್ಕರ ಅಭಿವೃದ್ಧಿ ನಿಮಗದಿಂದ ಕೊಳವೆ ಬಾವಿ ಮಂಜೂರಾಗಿದ್ದರು, ಬಿ.ಜೆ.ಇಂಡಿ ಇವರಿಗೆ ಹಲವಾರು ಬಾರಿ ಬೇಟಿಯಾಗಿ ಕೇಳಲು ಹೊದರೆ, ಉಢಾಫೆ ಉತ್ತರ ನೀಡುತ್ತಿದ್ದಾರಲ್ಲದೆ, ನೀವು ಏನು ಬೇಕಾದರು ಮಾಡಿಕೊಳ್ಳಿ ಎಂದು ಗದರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸುಖದೇವ ಎಸ್. ಕಟ್ಟಿಮನಿ ಮಾತನಾಡಿ, ಬಿ. ಜೆ.ಇಂಡಿ ಅವರು ನಮ್ಮ ಸಮಿತಿಯವರನ್ನು ಬೆದರಿಸಿ ಜಾತಿನಿಂದನೆ ಮಾಡಿರುತ್ತಾರೆ. ಇವರ ಮೇಲೆ ಕ್ರಮ ಜರುಗಿಸಿ. ಇವರನ್ನು ಅಮಾನತ್ತು ಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಆಲಗೂರ, ಜಿಲ್ಲಾ ಉಪಾಧ್ಯಕ್ಷ ಸುಭಾಶಚಂದ್ರ ಹೊನ್ನಕಂಟ್ಟಿ, ತಿಪ್ಪಣ್ಣ ಮೇಲಿನಮನಿ, ಕಮಲಸಾಬ ಕಾಟಮನಳ್ಳೀ, ಶಿವಶರಣ ಕಾಂಬಳೆ, ತುಕಾರಾಮ ಮಮದಾಪೂರ, ಮುನ್ನಾ ಕೋಜಿಗಿಲ, ಶಿವಾನಂದ ಕೋಳಿ, ಟಿಟಿ.ಚವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

