ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸಾಹಿತಿ ಪ್ರೊ. ಸಿದ್ದಪ್ಪ ಸಾವಳಸಂಗ ಇವರು ಸಾಹಿತ್ಯ-ಭಾಷೆ, ನೆಲ-ಜಲ, ಸಂಸ್ಕೃತಿ ಮೊದಲಾದ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆ-ಸಾಧನೆ, ಜ್ಞಾನ ಮತ್ತು ಪ್ರೀತಿಯನ್ನು ಗುರುತಿಸಿ, ಕವಿತ್ತ ಕರ್ಮಮಣಿ ಫೌಂಡೇಶನ್(ರಿ) ನಾಗರಮುನ್ನೋಳ್ಳಿ ತಾಲ್ಲೂಕು ಚಿಕ್ಕೋಡಿ ಬೆಳಗಾವಿ ಜಿಲ್ಲೆ ಇವರ ವತಿಯಿಂದ ಕೊಡಮಾಡುವ 2025ನೇ ಸಾಲಿನ ಅಂತರಾಷ್ಟ್ರೀಯ ಮಟ್ಟದ “ಕವಿ ಕುಲಪತಿ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 27 ಜುಲೈ 2025ರಂದು ನಡೆಯುವ “ಅಂತರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ” ದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

