ಇಂಡಿ: ಹಾಲು ಉತ್ಪಾದನೆ ಹಾಗೂ ಶೇಖರಣೆಯಲ್ಲಿ ಪ್ರಥಮ ಸ್ಥಾನ ತಾಲೂಕಿನ ಭತಗುಣಕಿ ಗ್ರಾಮದ ಹಾಲು ಉತ್ಪಾದಕ ಸಂಘಕ್ಕೆ ಸಲ್ಲುತ್ತದೆ ಎಂದು ವಿಜಯಪುರ ಹಾಗೂ ಬಾಗಲಕೋಟ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ದೀಕ್ಷಿತ ಕುಮಾರ್ ಹೇಳಿದರು.
ತಾಲೂಕಿನ ಭತಗುಣಕಿ ಗ್ರಾಮದ ಹಾಲು ಉತ್ಪಾದಕ ಸಂಘದ 2023-24 ನೇ ಸಾಲಿನ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರಿಗೆ ಪ್ರಮಾಣ ಪತ್ರ ನೀಡಿ ಅವರು ಮಾತನಾಡಿದರು.
ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಸಂಭಾಜಿ ಮಿಸಾಳೆ ಮಾತನಾಡಿ, ಅವರು, 2022/23 ನೇ ಸಾಲಿನಲ್ಲಿ ರೈತರಿಂದ ಸುಮಾರು 8,32,500 ಲೀಟರ್ ಹಾಲು ಶೇಖರಣೆ ಮಾಡಿದ್ದು, ಸಂಘವು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಹಸುಗಳ ಆರೋಗ್ಯ ದೃಷ್ಟಿಯಿಂದ ಸಂಘದ ಸ್ವಂತ ಲಾಭಾಂಶದಲ್ಲಿ ರೈತರಿಗೆ ಪ್ರತಿ ಲೀಟರ್ ಗೆ ₹3 ಹೆಚ್ಚುವರಿಯಾಗಿ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಹಳಕೆ, ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರಾಮ ತಳಕೇರಿ, ಅಪ್ಪಸಾಹೇಬ ಪವಾರ, ಶಿವಪುತ್ರ ಜೇವರಗಿ, ಗಂಗಾಧರ ಘಾಟಗೆ, ಶಿವಾಜಿ ಶಿಂದೆ, ದಶರಥ ಘಾಟಗೆ, ರಹಿಮಸಾವ ಬಾಗವಾನ, ಬಸವರಾಜ ವಾಘಮೋರೆ, ಲಲಿತಾ ಜಾಧವ, ನಾಗುಬಾಯಿ ಕರಾಡೆ ಉಪಸ್ಥಿತರಿದ್ದರು.
Related Posts
Add A Comment