ಉದಯರಶ್ಮಿ ದಿನಪತ್ರಿಕೆ
ಚಡಚಣ: ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು ಶಿಕ್ಷಣ ಶ್ರೇಷ್ಠ ಸೇವೆ. ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಹೋರ್ತಿ ಗ್ರಾಮದ ಶ್ರೀ ರೇಣುಕ ವಿಜಯ ಕಲ್ಯಾಣ ಮಂಟಪ ಆವರಣದಲ್ಲಿ ನಡೆದ ಸೇವಾ ನಿವೃತ್ತಿ ಹೊಂದಿರುವ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಬಿ ಬಿ ಗಡ್ಡದ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ನಮ್ಮತನ ಯಾವತ್ತಿದ್ದರೂ ಅಳಿದು ಹೋಗದಂತೆ ವಿಶ್ವದ ಭೂಪಟದಲ್ಲಿ ನಾವು ಮಿಂಚಬೇಕು ಎನ್ನುವ ಮಾತಿನಂತೆ ಬಿ ಬಿ.ಗಡ್ಡದವರು ಇಂಡಿ ತಾಲ್ಲೂಕಿನ ಹೋರ್ತಿ ಎಂಬ ಹಳ್ಳಿಯಿಂದ ಬೆಳೆದು ನಿಂತು ಇವತ್ತು ವಿವಿಧ ಸಂಸ್ಥೆಗಳು ಹಾಗೂ ಸಹಕಾರಿ ಸಂಘಗಳ ಮೂಲಕ ಸಾಧನೆ ಮಾಡುತ್ತಿದ್ದಾರೆ. ಅವರದ್ದು ಸೌಮ್ಯ-ಗಂಭೀರ ಸ್ವಭಾವ. ವ್ಯತಿರಿಕ್ತ ಸಂದರ್ಭಗಳಲ್ಲಿ ಕಷ್ಟಗಳನ್ನು ಅನುಭವಿಸಿ ಯಾರೂ ಬೆಳೆದು ಬರುತ್ತಾರೋ ಅವರಿಗೆ ಸಾಧನೆ ಮಾಡುವ ಹುಮ್ಮಸ್ಸಿರುತ್ತದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ಈಶಪ್ರಸಾದ ಮಹಾಸ್ವಾಮಿಗಳು ಗುರುದೇವ ಆಶ್ರಯ ಅಥರ್ಗಾ ಅವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ.
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಭೋಸಗಿ, ಶ್ರೀಮಂತ ಇಂಡಿ, ಬಾಬುಗೌಡ ಪಾಟೀಲ, ಸಿ ಎಸ್ ಮಜ್ಜಗಿ, ಸಿದರಾಯ ಮೇತ್ರಿ, ಎಸ್ ಎಸ್ ಪಾಟೀಲ, ಎಸ್ ಎಸ್ ಕುಲಕರ್ಣಿ, ಜಿ ಆರ್ ಕಟ್ಟಿಮನಿ, ಎ ಎಸ್ ಹಂಜಗಿ, ಸುನೀಲ ರಾಠೋಡ, ಬಸವರಾಜ ಉಮರಾಣಿ, ಕೆ ಎಸ್ ಸೋನ್ನಗಿ, ಎಸ್ ಎಸ್ ಬೋರಗಿ,ಪಿ ಸಿ ಬಮ್ಮನಳ್ಳಿ, ಸಂತೋಷ ಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

