ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ರವಿವಾರ ಎಲ್ಲಾ ಧರ್ಮದ ಸಹೋದರರು ಭಾವೈಕ್ಯತೆಯಿಂದ ಕೂಡಿ ಮೊಹರಂ ಹಬ್ಬವನ್ನು ಶಾಂತಿಯಿಂದ ಆಚರಿಸಿದರು.
ಕೊಲ್ಹಾರ ಎಂದರೆ ನೆನಪಾಗುವುದು ಕೆನೆ ಮೊಸರು ಕುಡಿಕೆ ಇದರ ಜೋತೆಗೆ ಮೊಹರಂ ಹಬ್ಬ ಈ ಹಬ್ಬದ ವಿಶೇಷತೆ ಪಟ್ಟಣದ ಏಳು ಮಕ್ಕಳ ತಾಯಿ ಯಿಂದ ಮೌಲಾ ಅಲಿ, ಜಿಂಗಿ ಸಾಹೇಬ, ಹಟೇಲ ಬಾಷಾ, ಹಾಶಿಂ ಪೀರ, ಇಮಾಮ ಕಾಸಿಂ, ಹುಸೇನ ಆಲಂ, ಲಾಲಸಾಬಪೀರ್ ಒಟ್ಟು ಹೀಗೆ ಏಳು ದೇವರು ಹಾಗೂ ಐದು ಡೋಲಿಗಳ ಎದುರುಗೊಳ್ಳಲು ಬರುವ ಸನ್ನಿವೇಶ ನೇರದ ಭಕ್ತರು ಹುಯಿಲೋ ಹುಯಿಲೋ ಘೋಷಣೆ ಮುಗಿಲು ಮುಟ್ಟಿತ್ತು.
ಪಟ್ಟಣದ ಹೃದಯ ಭಾಗದಲ್ಲಿರುವ ಅಗಸಿ ಮುಂದಿನ ಗಾಂಧಿ ಸರ್ಕಲ್ ನಲ್ಲಿ ಐದು ಡೋಲಿಗಳು ನಿಂತಲ್ಲಿ ಊರಿನ ಹಿರಿಯರು ಯುವಕರು ಭಕ್ತರು ಬಂದು ಉತ್ತತ್ತಿ ಹಾರಿಸಿ,ಲೋಬಾಣ ಹಾಕಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ವಿಶೇಷತೆ: ಪಟ್ಟಣದಲ್ಲಿ ಎಲ್ಲಾ ಧರ್ಮದ ಸಹೋದರರು ಭಾವೈಕ್ಯತೆಯಿಂದ ಅಲಾಯಿ ಹೆಜ್ಜೆ ಹಾಕುತ್ತಾ, ಕರಡಿ ಮಜಲಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವರನ್ನು ಬಿಳ್ಕೊಟ್ಟರು.
ಪಟ್ಟಣದ ಪ್ರಮುಖರಾದ ವಿನಿತಕುಮಾರ ದೇಸಾಯಿ, ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ. ಪಕಾಲಿ, ಮೊಹಮ್ಮದ್ ಸಲೀಂ ಅತ್ತಾರ, ಹಸನ ಪಕಾಲಿ, ಗೂಳಪ್ಪ ವಾಲಿಕಾರ, ಬಿ.ಡಿ. ಕಲಾದಗಿ, ಜಾವೀದ ಬೀಳಗಿ, ಎಂ.ಆರ್. ಕಲಾದಗಿ, ಇಕ್ಬಾಲ್ ನದಾಫ, ಲಾಲಸಾಬ ಗಿರಗಾವಿ, ಅಬ್ಬು ಪಕಾಲಿ, ದಾದಾ ಕಂಕರಪೀರ, ಬಾಬು ಬಜಂತ್ರಿ, ಸುರೇಶ ಗಿಡ್ಡಪ್ಪಗೋಳ, ಇಸ್ಮಾಯಿಲ ನದಾಫ್, ದಶರಥ ಈಟಿ, ಮೋದಿನ ಪಕಾಲಿ ಹಾಗೂ ಇನ್ನಿತರರು ಇದ್ದರು.

