ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರಾಜ್ಯ ಸರ್ಕಾರದ ನಾಗರಿಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್ ಕೇಂದ್ರಗಳು ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತವೆ. ನಾಗರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯಬಹುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ಮುಖ್ಯ ಬಜಾರನ ಹಳೇ ಅಂಜುಮನ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಒನ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
ಖಾಸಗಿ ಸೇವೆಗಳನ್ನು ನಾಗರಿಕರಿಗೆ ಸುಲಭವಾಗಿ ಒದಗಿಸುವುದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದು, ಸಮಯ ಮತ್ತು ಹಣವನ್ನು ಉಳಿಸುವುದು, ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತವನ್ನು ಒದಗಿಸುವುದು, ನಾಗರಿಕರ ಅಗತ್ಯಗಳಿಗೆ ಸ್ಪಂದಿಸುವುದು ಈ ಕೇಂದ್ರದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕೆ.ವಿಜಯಕುಮಾರ, ಪ.ಪಂ ಅಧ್ಯಕ್ಷ ಸಾಧೀಕ ಸುಂಬಡ, ಕರ್ನಾಟಕ ಓನ್ ನಿರ್ವಹಕ ಇರ್ಫಾನ್ ಹುಂಡೇಕಾರ, ಸೈಪನ್ ಜಮಾದಾರ, ಸೈಪನ್ ಮುಲ್ಲಾ, ಪ್ರಭು ವಾಲೀಕಾರ, ಉಸ್ಮಾನ ಹುಂಡೇಕಾರ, ಮೌಲಾಲಿ ಬಾಗವಾನ ಸೇರಿದಂತೆ ಅನೇಕರಿದ್ದರು.

