ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ | ೭೩ ಸಸಿ ನೆಟ್ಟು ಪರಿಸರದ ಜಾಗೃತಿ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಪ್ರತಿ ವರ್ಷ ಜುಲೈ ತಿಂಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ನೆಟ್ಟಿದ ಸಸಿಗಳನ್ನು ಮರವಾಗಿ ಬೆಳೆಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಝಿನ ಪ್ರಾಂಶುಪಾಲ ಡಾ.ಸಂತೋಷ ಹುಗ್ಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಕಲಬುರಗಿ ವಿಭಾಗದ ವತಿಯಿಂದ ನಡೆದ ವನಮಹೋತ್ಸವದ ಅಂಗವಾಗಿ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗಿಡ ಮರಗಳು ಹೇರಳವಾಗಿ ಬೆಳೆಸಿದರೆ ಸಾಕಷ್ಟು ಲಾಭಗಳಿವೆ. ಭೂಮಿ ಮೇಲಿನ ಪ್ರತಿ ಜೀವಿಗೂ ಗಾಳಿ ಅವಶ್ಯಕವಿದೆ. ಅಷ್ಟೇ ಅಲ್ಲ ಮಳೆ ಹೆಚ್ಚಳವಾಗಿ ಅಂತರ್ಜಲವೂ ಹೆಚ್ಚಳವಾಗುತ್ತದೆ ಎಂದ ಅವರು ಪ್ರತಿಯೊಬ್ಬರು ಅರಣ್ಯ ಪ್ರದೇಶ ನಾಶವಾಗದಂತೆ ಕಾಪಾಡಬೇಕು. ಎಲ್ಲೆದಂರಲ್ಲಿ ಗಿಡಗಳಿಂದ ತುಂಬಿದಂತಾಗಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಡಾ.ದತ್ತಾತ್ರೇಯ ಸಿ.ಹೆಚ್ ಮಾತನಾಡಿ, ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಎಲ್ಲೆಡೆ ವನಮಹೋತ್ಸವ ಕಾರ್ಯಕ್ರಮದ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರದ ಸೌಂದರ್ಯ ಕಾಪಾಡಿದರೆ ನಮ್ಮನ್ನು ಪರಿಸರ ಕಾಯುತ್ತದೆ ಹೀಗಾಗಿ ಎಲ್ಲರೂ ಗಿಡ ಮರಗಳ ಪೋಷಣೆ ಮಾಡುವುದು ಅತ್ಯಂತ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕಿ ಎಂ.ಎಸ್. ರಾಜೇಶ್ವರಿ, ಸಿಬ್ಬಂದಿ ಕಾರ್ಯದರ್ಶಿ ಸೂರ್ಯಕಾಂತ ಉಮಾಪುರೆ, ಡಾ.ಸಾವಿತ್ರಿ ಕಷ್ಣ, ಡಾ.ಭಾರತಿ ಭೂಸಾರೆ, ಡಾ.ರಾಘವೇಂದ್ರ, ಪ್ರವೀಣ ಸೇಡಮ್‌ಕರ್, ವೈಜನಾಥ ಭಾವಿ, ಡಾ.ಸುರೇಖಾ ಕರೂಟಿ, ಡಾ.ಶಾಂತಪ್ಪ ಮೇಲಕೇರಿ, ಗೌರಿಶಂಕರ ಭೂರೆ, ಸಂತೋಷ ಜಿ, ರಾಜಕುಮಾರ ಹಾಗೂ ಅರಣ್ಯ ಇಲಾಖೆಯ ರಮೇಶ ತಲ್ವಾರ್, ಶ್ರೀಶೈಲ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

