ಉದಯರಶ್ಮಿ ದಿನಪತ್ರಿಕೆ
ಇಂಡಿ: ಮೊಹರಂ ನಿಮಿತ್ಯ ರವಿವಾರ ನಸುಕಿನ ೫ ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಹುಸೇನ, ಹಸನ ಮತ್ತು ಕಾಸಿಮರ ಭವ್ಯ ಮೆರವಣೆಗೆ ನಡೆಯಿತು.
ದಾದಾಗೌಡರ ಮನೆಯಿಂದ ಹೂವಿನ ಅಲಂಕಾರ ಬಂದ ನಂತರ ಸಿಂಗರಿಸಿ ಮೆರವಣೆಗೆ ಪ್ರಾರಂಭವಾಗುತ್ತದೆ.
ಎತ್ತಿನ ಗಾಡಿಯಲ್ಲಿ ನಗಾರಿ ಹಾಕಿ ಬಾರಿಸುವದರೊಂದಿಗೆ ಪ್ರಾರಂಭವಾಯಿತು. ರೈತರು ತಮ್ಮ ಎತ್ತುಗಳನ್ನು ಎತ್ತಿನ ಬಂಡಿಗೆ ಬದಲಾಯಿಸಿ ಪ್ರದರ್ಶನ ಮಾಡುವದು ಇಂದು ವಿಶೇಷ.
ಅಲಾವಿ ಕುಣಿತ, ಕೋಲು ಮೇಳ,ಕಡೆಗೋಲು ಮೇಳ, ಭಡಂಗ ಕುಣಿತ, ತಾಷಾ, ಬೆಂಡ್ ಕುಣಿತ ಹುಲಿ ವೇಷ, ಬಾವಾ, ಫಕೀರ ಸೇರಿದಂತೆ ಸುಮಾರು ಎರಡು ಕಿ.ಮಿಉದ್ದದ ಮೆರವಣೆಗೆ ನಡೆಯಿತು.
ಮೆರವಣೆಗೆ ಮಹಾವೀರ ವೃತ್ತದಲ್ಲಿ ಬಂದಾಗ ಮೂರು ಜೇನು ಹುಳಗಳು ಬಂದು ಪಂಜಾ ಸ್ಪರ್ಶ ಮಾಡುವದು ಒಂದು ವಿಶೇಷ.
ಪಾಂಜಾ ಕುರಿಸಿದ ದೇವಸ್ಥಾನದಲ್ಲಿ ಕವಡೆ — ಉದು ಹಾಕಿ ಹೂವಿನಿಂದ ಅಲಂಕರಿಸಿ ಮಗ್ದುಮ ಸಕ್ಕರೆ ಫಾತೇಹ ನೀಡಲಾಯಿತು.
ಯುವಕರು ಹಾಗು ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ ಮೆರವಣೆಗೆಯಲ್ಲಿ ಪಾಲ್ಗೊಳ್ಳುತ್ತಾರೆ.ಅಳ್ಳೊಳ್ಳಿ ಬಾವಾಗಳಾಗಿ ಹುಲಿ ವೇಷ ಧರಿಸಿ ಆಲಾವಿ ಕುಣಿತ ಮಾಡುತ್ತ ಮೆರವಣೆಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೆರವಣೆಗೆ ನಂತರ ದಾರವನ್ನು ಅಗ್ನಿಕುಂಡದಲ್ಲಿ ಹಾಕುವ ಮೂಲಕ ಭಕ್ತಿ ಸಮರ್ಪಿಸಲಾಗುತ್ತಿದೆ. ಹುಲಿ ವೇಷ ಹಾಕಿ ಮೆರವಣೆಗೆಯಲ್ಲಿ ಪಾಲ್ಗೊಳ್ಳುವದು ಒಂದು ವಿಶೇಷ. ಮೈಗೆ ಹಳದಿ ಬಣ್ಣ ಹಚ್ಚಿ ಹುಲಿ ವೇಷದ ಯುವಕರು ಹುಲಿ ಕುಣಿತ ನಡೆಸುವರು.
೯ ಗಂಟೆಗೆ ಮತ್ತೆ ದೇವಸ್ಥಾನ ತಲುಪಿ ಅಲ್ಲಿ ಪಂಜೆಗಳನ್ನು ದಫನ ಮಾಡುವದು ಇಂಡಿಯ ಮೊಹರಂ ಒಂದು ವಿಶೇಷ.
ಭಕ್ತರು ದಿವಟಿಗೆ ಹಿಡಿದು ಭಕ್ತಿ ಪ್ರದರ್ಶಿಸುವದು ಒಂದು ವಿಶೇಷ. ಸುಮಾರು ೫೦ ಕ್ಕೂ ಹೆಚ್ಚು ದಿವಟಿಗೆ ಹಚ್ಚಿ ತಮ್ಮ ಭಕ್ತಿ ಪ್ರದರ್ಶಸಿದರು.
ಪೋಲಿಸ ಬಂದೋ ಬಸ್ತ ನಡುವೆ ಮೆರವಣೆಗೆ ನಡೆಯಿತು.

