ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತ್ಯಾಗ ಬಲಿದಾನದ ಪ್ರತೀಕವಾದ ಮೊಹರಂ ಅಂಗವಾಗಿ ಅಲಾಯಿ ದೇವರ ಪಂಜಾ ಹಾಗೂ ಡೋಲಿ ಮೆರವಣಿಗೆ ಸರಳವಾಗಿ ಜರುಗಿದವು.
ಪಟ್ಟಣದಲ್ಲಿ ಭಾನುವಾರ ಸಾಂಪ್ರದಾಯಿಕ ಹಿಂದೂ-ಮುಸ್ಲಿ ಭಾವೈಕ್ಯತೆಯ ಮೊಹರಂನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಕೊನೆಯ ದಿನ ಸಂಪ್ರದಾಯದಂತೆ ಬಿ.ಕೆ.ಪಾಟೀಲ ಊದ್ ಹಾಕುವುದರ ಮೂಲಕ ಚಾಲನೆ ನೀಡಿದರು. ನಂತರ ಅಲಾಯಿ ದೇವರ ಮೆರವಣಿಗೆ ಹಲಿಗೆ ವಾಧ್ಯಮೇಳದೊಂದಿಗೆ ಬಜಾರ್ ಮಾರ್ಗದಲ್ಲಿ ಜರುಗಿತು. ಈ ಸಮಯದಲ್ಲಿ ಎರಡು ಸಮುದಾಯದ ಜನರು ಕೋಲು ಹಿಡಿದು, ಹೆಜ್ಜೆ ಹಾಕಿ ಭಕ್ತಿಭಾವ ಪ್ರದರ್ಶಿಸಿದರು.
ಮೆರವಣಿಗೆಯಲ್ಲಿ ಮಲ್ಲನಗೌಡ ಪಾಟೀಲ, ಸಂಪತ್ ಜಮಾದಾರ, ಮಲ್ಲು ನಾಟೀಕಾರ, ಸುಭಾಸ ಕಡ್ಲೇವಾಡ, ಚಂದ್ರು ಮೆಟಗಾರ, ಜಮೀರ್ ಮಕಾಂದಾರ್, ಸೈಫನ್ ಅತ್ತಾರ, ಅಶೋಕ ರಾಮಗೊಂಡ, ಮಡಿವಾಳಪ್ಪ ಕೋರಿ, ರಾವುತ ಮೆಟಗಾರ, ಮಲ್ಲು ಜಮಾದಾರ, ಶ್ರೀಶೈಲ ಜಮಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

