ಕೊಲ್ಹಾರ ತಾಲೂಕು ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
ಕೊಲ್ಹಾರ: ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ತಾಲೂಕಿನ ಮುಳವಾಡ ಗ್ರಾಮದ ಸತ್ಯ ಸಾಯಿ ರಂಗಮAದಿರದಲ್ಲಿ ಜರುಗಿದ ಕೊಲ್ಹಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಹೆಮ್ಮೆಯ ಸಂಸ್ಥೆಯಾಗಿದೆ. ನಾಡಿನ ಮೂಲೆ ಮೂಲೆಗಳಲ್ಲಿ ಕನ್ನಡ ಸಾಹಿತ್ಯವನ್ನು ಬಾಷಾಭಿಮಾನವನ್ನು ಹಬ್ಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಸಾಹಿತ್ಯ ಪರಿಷತ್ ಬೆಳವಣಿಗೆಯಲ್ಲಿ ಅಪಾರವಾಗಿದೆ ಎಂದರು.
ಕೊಣ್ಣೂರ ಹಾಗೂ ಮುಳವಾಡ ಗ್ರಾಮದ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದರು.
ಮಸೂತಿ ಗ್ರಾಮದ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಸ್ವಾಮೀಜಿ, ನಾಗರದಿನ್ನಿ ಗ್ರಾಮದ ಸದ್ಗುರು ಸದಾನಂದ ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ, ಕಲಗುರ್ಕಿ ಗ್ರಾಮದ ದಯಾನಂದ ಹೀರೆಮಠ ಸ್ವಾಮೀಜಿ, ಹಳ್ಳದ ಗೆಣ್ಣೂರ ಭೀರಲಿಂಗೇಶ್ವರ ದೇವಸ್ಥಾನದ ಪೀಠಾಧ್ಯಕ್ಷರಾದ ಸಿದ್ದಪ್ಪ ಪೂಜಾರಿ ಸಾನಿಧ್ಯ ವಹಿಸಿದ್ದರು.
ಗ್ರಾ.ಪಂ ಅಧ್ಯಕ್ಷ ಹಣಮಂತ ಕಳಸಗೊಂಡ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅಶೋಕ ಗಿಡ್ಡಪ್ಪಗೋಳ, ಮಲ್ಲು ನಾಗೂರ ಟಿ.ಪಿ ದಳವಾಯಿ, ಗೀತಾ ಕುಲಕರ್ಣಿ, ಮಹಮ್ಮದಗೌಸ ಹವಾಲ್ದಾರ, ಡಾ. ಮಾಧವ ಗುಡಿ, ಮಹಾದೇವ ಮಮದಾಪೂರ, ಸಂಗನಗೌಡ ಪಾಟೀಲ್ ಉಪಸ್ಥಿತರಿದ್ದರು.