ಚಿಮ್ಮಡ: ಶರಣ ಸಂಪ್ರದಾಯದಲ್ಲಿ ದಾಸೋಹಕ್ಕೆ ವಿಶಿಷ್ಠಸ್ಥಾನವಿದೆ, ಆದರೆ ದಾಸೋಹದ್ದೇ ಜಾತ್ರೆ ನಡೆಯುವ ಮೂಲಕ ಚಿಮ್ಮಡ ಗ್ರಾಮ ಉತ್ತರ ಕರ್ನಾಟಕದ ಧರ್ಮಸ್ಥಳವಾಗಿದೆ ಎಂದು ಹಂದಿಗುಂದ ಆಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಗ್ರಾಮದಲ್ಲಿ ಕಿಚಡಿ ಜಾತ್ರೆಯ ಅಂಗವಾಗಿ ಓಂಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಅನುಭವ ಮಂಟಪದಲ್ಲಿ ಗುರುವಾರ ನಡೆದ ಆದ್ಯಾತ್ಮಿಕ ಚಿಂತನಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರು ಜಾತ್ರೆಯ ಚಟುವಟಿಕೆಯಲ್ಲಿ ಭಾಗವಹಿಸಿ ದೇವಸ್ಥಾನದ ಆವರಣವನ್ನು ನಂದನವನವಾಗಿಸಿದ್ದಾರೆ. ಯುವ ಸಮುದಾಯವನ್ನು ಯೋಗ್ಯವಾದ ಮಾರ್ಗದಲ್ಲಿ ಬಳಸಿಕೊಂಡರೆ ದೇಶವನ್ನೇ ವಿಶ್ವಗುರುವನ್ನಾಗಿಸಬಹುದು ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ವಿಶಿಷ್ಟ ಜಾತ್ರೆಯೆಂಬ ಹೆಗ್ಗಳಿಕೆ ಹೊಂದಿರುವ ಚಿಮ್ಮಡ ಕಿಚಡಿ ಜಾತ್ರೆಯಲ್ಲಿ ಲಕ್ಷಾಂತರ ಜನರಿಗೆ ಏಕಕಾಲಕ್ಕೆ ದಾಸೋಹ ಹಮ್ಮಿಕೊಳ್ಳುವ ಮೂಲಕ ಸಮಾನತೆ ಒಡಮೂಡಿಸುತ್ತಿವೆ. ಜಾತ್ರೆಗಳು ಜನರ ಉತ್ಸವಗಳಾಗಬೇಕೆಂದು ಆಶೀರ್ವಚನ ನೀಡಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿದರು.
ಸ್ಥಳೀಯ ವಿರಕ್ತಮಠದ ಪ್ರಭು ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಮಖಂಡಿ ಓಲೇಮಠದ ಡಾ.ಅಭಿನವಕುಮಾರ ಚನ್ನಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ರಬಕವಿ ಬ್ರಹ್ಮಾನಂದ ಮಠದ ಗುರುಸಿದ್ದೇಶ್ವರ ಸ್ವಾಮಿಗಳು, ರಾಮದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಸ್ವಾಮಿಗಳು, ಸುನಧೋಳಿ ಜಡಿ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು, ಕೊಣ್ಣೂರು ಕಲ್ಯಾಣ ಹೊರಗಿನ ಮಠದ ಶಿವಪ್ರಭು ಶಿವಾಚಾರ್ಯರು, ತೇರದಾಳ ಹಿರೇಮಠದ ಶಿವಕುಮಾರ ದೇವರು, ಕೊಪ್ಪಳ ಒಣಕೇರಿ ಆಶ್ರಮದ ಯಶವಂತ ಶ್ರೀಗಳು, ಅರಕೇರಿ ಅಮಸಿದ್ದ ಮಹಾರಾಜರು, ಸಾರವಾಡ ಮಠದ ಕೃಷ್ಣಯ್ಯ ಶ್ರೀಗಳು ಸೇರಿದಂತೆ ಹಲವಾರು ಮಠಗಳ ಶ್ರೀಗಳು ಭಾಗವಹಿಸಿದ್ದರು.
ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಆರ್.ವೈ.ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಬಿ.ಎಸ್.ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಗುರುಲಿಂಗಪ್ಪ ಪೂಜಾರಿ ಆರ್,ಎಂ.ಬಗನಾಳ, ಪರಪ್ಪಾ ಪಾಲಭಾವಿ, ದುಂಡಪ್ಪಾ ಪಾಟೀಲ, ಪ್ರಕಾಶ ಪಾಲಭಾವಿ ಇನ್ನಿತರರು ಪಾಲ್ಗೊಂಡಿದ್ದರು.
ಕುಮಾರಿ ಐಶ್ವರ್ಯ ಹೊಸೂರ ವಚನ ಪ್ರಾರ್ಥನೆಗೈದರು. ಉಪನ್ಯಾಸಕ ಪ್ರಕಾಶ ಬಡಿಗೇರ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ಪೂಜೆರಿ ನಿರೂಪಿಸಿ, ವಂದಿಸಿದರು.