ಬಸವನಬಾಗೇವಾಡಿ: ಹಾನಗಲ್ ಕುಮಾರ ಸ್ವಾಮೀಜಿಯವರ 156ನೇ ಜಯಂತೋತ್ಸವ ಅಂಗವಾಗಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಡೆಯುತ್ತಿರುವ ದುಶ್ಚಟಗಳ ಭಿಕ್ಷೆ- ಸದ್ಗುಣಗಳ ದೀಕ್ಷೆ ಜನ ಜಾಗೃತಿ ಪಾದಯಾತ್ರೆಯು ಗುರುವಾರ ಪಟ್ಟಣದ ವೀರಭದ್ರೇಶ್ವರ ನಗರ, ಮುತ್ತಗಿ ಗ್ರಾಮ ಸೇರಿದಂತೆ ವಿವಿಧೆಡೆ ನಡೆಯಿತು.
ನಂತರ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿ ಜರುಗಿದ ಸಮಾರಂಭದಲ್ಲಿ ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಹಾನಗಲ್ ಕುಮಾರ ಸ್ವಾಮೀಜಿ ಅವರ ಜಯಂತ್ಯೋತ್ಸವ ಅಂಗವಾಗಿ ವಿವಿಧ ಮಠಾಧೀಶರ ನೇತೃತ್ವದಲ್ಲ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಜನರು ಶ್ರದ್ಧಾ ಭಕ್ತಿಯಿಂದ ಸ್ವಾಗತ ಕೋರುತ್ತಿದ್ದಾರೆ. ಯುವಕರು ದುಶ್ಚಟಗಳಿಗೆ ದಾಸರಾಗದೇ ಆಧ್ಮಾತ್ಮಿಕ ವಿಚಾರಗಳನ್ನು ತಿಳಿದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಅಕ್ಕಲಕೋಟೆಯ ಚನ್ನಬಸವ ದೇವರು ಮಾತನಾಡಿದರು, ಜಯಂತೋತ್ಸವ ಸಮಿತಿ ಅಧ್ಯಕ್ಷ ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ವೀರಬಸವ ದೇವರು, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಸಂಗಪ್ಪ ಅಡಗಿಮನಿ, ಜಗದೀಶ ಕೊಟ್ರಶೆಟ್ಟಿ, ಸಂಗಮೇ ಓಲೇಕಾರ, ರವಿಗೌಡ ಚಿಕ್ಕೊಂಡ, ಬಸವರಾಜ ಕೋಟಿ, ಪರಸು ತುಪ್ಪದ, ಎಚ್.ಬಿ.ಬಾರಿಕಾಯಿ, ಎಸ್.ಕೆ.ಸೋಮನಕಟ್ಟಿ, ಶಿವು ಮಡಿಕೇಶ್ವರ, ಕೊಟ್ರೇಶ ಹೆಗಡ್ಯಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment