ಮುದ್ದೇಬಿಹಾಳ: ನಾವು ಹಬ್ಬ ಹರಿದಿನಗಳನ್ನು ಆಚರಿಸಿ ಪರಿಸರ ಘಾತಕ ಚಟುವಟಿಕೆಗಳಾದ ಪಟಾಕ್ಷಿ-ಸಿಡಿಮದ್ದು, ಪ್ಲಾಸ್ಟಿಕ್ ವಸ್ತುಗಳ ಅನಾವಶ್ಯಕ ಬಳಕೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಿ ಪರಿಸರವನ್ನು ನಾಶ ಮಾಡುವುದರ ಬದಲು ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಜ್ಞಾನ ಭಾರತಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಅನಂತಚತುದರ್ಶಿ ನಿಮಿತ್ತ ಪರಿಸರದ ಮೇಲೆ ಪ್ರೇಮ ಮೂಡಿಸುವ ಸಲುವಾಗಿ ಆಚರಿಸಿರುವ ವೃಕ್ಷ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ನಮ್ಮ ಕಾಲಕ್ಕೆ ಮಾತ್ರವೇ ಪರಿಸರ ಉಳಿದರೆ ಸಾಕೆಂದು ವಿಚಾರ ಮಾಡಬಾರದು. ಮುಂದಿನ ತಲೆಮಾರಿನವರಿಗೂ ಶುದ್ಧ ಪರಿಸರವನ್ನು ಉಳಿಸಿಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ವೃಕ್ಷವನ್ನು ರಕ್ಷಿಸಿದರೆ ಆ ವೃಕ್ಷವು ಇಡೀ ಜೀವ ಸಂಕುಲವನ್ನೇ ಅನಂತವಾಗಿ ರಕ್ಷಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ದೈಹಿಕ ಶಿಕ್ಷಕರಾದ ಯು.ಸಿ.ಕೋನರೆಡ್ಡಿ, ಸಚಿನ ರಾಠೋಡ, ಮುತ್ತು ದೊಡಮನಿ, ಶಿಕ್ಷಕ ಬಿ.ಆರ್.ಬೆಳ್ಳಿಕಟ್ಟಿ, ಬಿ.ಟಿ.ಭಜಂತ್ರಿ, ಎಮ್.ಪಿ.ಪಡದಾಳಿ, ಆರ್.ಎಸ್.ಮಡಿವಾಳರ್, ಅಭಿಷೇಕ ಹುನಗುಂದ ಸೇರಿದಂತೆ ಇತರರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment