ಸಿಂದಗಿ: ಕಾಲ ಕಾಲಕ್ಕೆ ಮಳೆಯಾಗದೇ ಇರುವುದರಿಂದ ರೈತರು ಜೀವನವನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಬ್ಯಾಂಕುಗಳಲ್ಲಿನ ಸಾಲ ಸೌಲಭ್ಯ ಪಡೆದುಕೊಂಡು ತಮ್ಮ ಜೀವನವನ್ನು ಬಲಪಡಿಸಿಕೊಳ್ಳಬೇಕು ಎಂದು ಪಿ.ಕೆ.ಪಿ.ಎಸ್ ಬ್ಯಾಂಕಿನ ಸದಸ್ಯ ಶಿವಪುತ್ರ ನಿಗಡಿ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ವತಿಯಿಂದ ಹಮ್ಮಿಕೊಂಡ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಯಾವುದೇ ರೀತಿಯ ಸಬ್ಸಿಡಿ ಸಾಲಗಳು ರೈತರ ಗಮನಕ್ಕೆ ಬರದೆ ಇರುವದರಿಂದ ಸಬ್ಸಿಡಿ ಸಾಲಕ್ಕೆ ಮನವಿ ಮಾಡಿಕೊಳ್ಳಲು ಹಿನ್ನಡೆಯಾಗುತ್ತಿದೆ. ಮುಂದಿನ ದಿನಾಮಾನಗಳಲ್ಲಿ ಸಂಘದ ಅಧಿಕಾರಿಗಳು ಬ್ಯಾಂಕಿಗೆ ಬಂದಂತ ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನು ನೋಟಿಸ್ ಬೋರ್ಡಿಗೆ ಅಂಟಿಸುವುದರ ಮೂಲಕ ರೈತರ ಗಮನಕ್ಕೆ ಬರುವಂತೆ ನೊಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಶೈಲ ಹಿರೇಮಠ, ಉಪಾಧ್ಯಕ್ಷ ಸಂಗಣ್ಣ ಕಡಕೋಳ, ನಿರ್ದೇಶಕ ಬಸಯ್ಯ ಮಠ, ಬಸವರಾಜ ಪಾಟೀಲ, ಶ್ರೀಶೈಲ ಬಗಲಿ, ಕಬಿರಸಾಬ ದೇಸುಣಗಿ, ಸಂಜೀವ ಬಮ್ಮನಳ್ಳಿ, ಅನ್ನಪೂರ್ಣ ಮಸಳಿ, ಜಯಶ್ರೀ ಬಗಲಿ, ನಿಂಗೋಂಡಪ್ಪ ತಳವಾರ, ಪರಮಾನಂದ ಮಾದರ ಹಾಗೂ ಬಂದಾಲ ಮತ್ತು ಚಿಕ್ಕಸಿಂದಗಿ ರೈತರು ಹಾಜರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಬುಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಬಸಯ್ಯ ಮಠಪತಿ ಹಾಗೂ ಬಸಲಿಂಗಯ್ಯ ಹಿರೇಮಠ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment