ತಿಕೋಟಾ: ಮಕ್ಕಳು ಮಾನವ ಲೋಕದ ಸುಂದರ ಕುಸುಮಗಳು ಅಂತಹ ಕುಸುಮಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಹೊರಗೆಳೆಯುವದೇ ಈ ಪ್ರತಿಭಾ ಕಾರಂಜಿಯಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಕಲೆಗಳ ಅನಾವರಣ ಆಗುವ ಈ ಕಾರ್ಯಕ್ರಮ ಅತ್ಯಂತ ಸುಮಧುರವಾದುದು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ದೊಂಡಿಬಾ ಕಟಕದೊಂಡ ಹೇಳಿದರು.
ವಿಜಯಪುರ ಗ್ರಾಮೀಣ ವಲಯದ ಆಹೇರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಆಹೇರಿ (ಜಂ)ಯ ಗುರುದೇವ ಪ್ರೌಢ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಯೋಜಕ ರವೀಂದ್ರ ಚಿಕ್ಕಮಠ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಯನ್ನು ಹೊರಗೆ ಹಾಕುವ ಈ ಪ್ರತಿಭಾ ಕಾರಂಜಿ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯವನ್ನು ಆಹೇರಿಯ ಪರಮಪೂಜ್ಯ ಚಲ್ಲಾಲಿಂಗ ಮಹಾಸ್ವಾಮಿಗಳು ಆಹೇರಿ ಅವರು ವಹಿಸಿದ್ದರು.
ಅಧ್ಯಕ್ಷತೆಯನ್ನು ಎಲ್. ಪಿ. ರಾಠೋಡ (ಗುರುದೇವ ವಿದ್ಯಾವರ್ಧಕ ಸಂಘ) ವಹಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು ನಾಯಕ್, ರಮೇಶ್ ರಾಠೋಡ, ಅಶ್ವಿನಿ ರಾಠೋಡ. ಪಿಡಿಓ ರೇಖಾ ಪವಾರ, ಮುಖ್ಯೋಪಾಧ್ಯಾಯರು ಬಿ. ಎಂ. ರಾಠೋಡ, ಬಿ. ಎ. ರಬಿನಾಳ, ರಜಪೂತ, ಶ್ರೀ ಕತ್ನಳ್ಳಿ, ಶ್ರೀ ಹಡಗಲಿ, ನೀಜು ಮೇಲಿನಕೇರಿ, ಕವಿತಾ ಕಲ್ಯಾಣಪ್ಪಗೋಳ, ಎಸ್. ಎಸ್. ನಡುವಿನಮನಿ, ಬಿ.ಎಂ.ಚಾಂದೋಡೆ, ವಿ.ವೈ. ಮುಳವಾಡ ,ಎಸ್. ಕೆ.ರಾತೋಡ್, ಆರ್. ಎನ್. ಅಂಗಡಿ , ಕಲಾವತಿ ರಾಥೋಡ್, ಸಂತೋಷ್ ಹದರಿ, ಉಮೇಶ್ ರೊಟ್ಟಿ, ಎಂ. ಬಿ. ನಾರಾಯಣಪುರ, ಈರಣ್ಣ ಹೊಸಟ್ಟಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

