ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಿಂದಗಿ ಮತಕ್ಷೇತ್ರದ ಗುಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಗುಗಿಹಾಳ ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ ೨೦೨೩ರ ಸಿಂದಗಿ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಗುಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗು ಮಾಡುತ್ತೇನೆ ಎಂದು ಹೇಳಿದ್ದೆ. ಅವರಿಗೆ ಕೊಟ್ಟ ಮಾತಿನಂತೆ ಗುಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿರುವೆ. ಇದಕ್ಕೆ ಸಹಕರಿಸಿದ ರಾಜ್ಯ ಸರಕಾರದ ಸಿಎಂ, ಡಿಸಿಎಂ, ಕಂದಾಯ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಾಂತನಗೌಡ ಪಾಟೀಲ, ಹಮಿದ ಚೌಧರಿ, ಲಕ್ಷ್ಮಣ ಗುಗಿಹಾಳ, ಚಾಂದ ಕಸಾಬ, ಮಾಶ್ಯಾಕ ಕಸಬ್, ಸೈಪಾಂ ಕಸಬ್, ಸೈಪನ ಚೌಧರಿ, ಗುಲಾಮ ಕೊರಬು, ವಜೀರ ಗುಗಿಹಾಳ ಸೇರಿದಂತೆ ಅನೇಕರಿದ್ದರು.