ಬಸವನಬಾಗೇವಾಡಿ: ಪಟ್ಟಣದ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಬಸವೇಶ್ವರ ದೇವಾಲಯ ಸಿಬಿಎಸ್‌ಇ ಹಾಗೂ ಕನ್ನಡ ಮಾಧ್ಯಮ ಶಾಲೆಗೆ ನೂತನವಾಗಿ ರಚನೆಗೊಂಡ ಆಡಳಿತ ಮಂಡಳಿಯ ಸನ್ಮಾನ ಸಮಾರಂಭ ಬುಧವಾರ ಸಂಜೆ ಜರುಗಿತು.
ಉಭಯ ಶಾಲೆಯ ಸನ್ಮಾನ ಸ್ವೀಕರಿಸಿ ಶಾಲಾ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಅನಿಲ ಅಗರವಾಲ ಮಾತನಾಡಿ, ಅಖಂಡ ತಾಲೂಕಿನಲ್ಲಿಯೇ ಈ ಶಾಲೆಯು ಉತ್ತಮ ಹೆಸರು ಪಡೆದುಕೊಂಡಿದೆ. ಶಿಕ್ಷಕರು ತಮ್ಮ ಪಠ್ಯದೊಂದಿಗೆ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳನ್ನು ತೊಡಗಿಸಬೇಕು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ಆಗುವ ನಿಟ್ಟಿನಲ್ಲಿ ನಿರಂತರವಾಗಿ ಶಿಕ್ಷಕ ಬಾಂಧವರು ಶ್ರಮಿಸಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಇಂದು ಶಾಲೆಯು ಸಾಕಷ್ಟು ಅಭಿವೃದ್ಧಿಯಾಗಿದೆ. ಮುಂಬರುವ ದಿನಗಳಲ್ಲಿ ಕಾಲೇಜು, ಪದವಿ ಕಾಲೇಜು ಆಗುವ ಜೊತೆಗೆ ವಸತಿ ಶಾಲೆಯಾಗುವಂತಾಗಿ ಈ ಭಾಗದ ಗ್ರಾಮೀಣ ಭಾಗದ ಮಕ್ಕಳಿಗೆ ಸದುಪಯೋಗವಾಗುವಂತಾಗಲಿ ಎಂದ ಅವರು, ಶಾಲಾಭಿವೃದ್ಧಿಗೆ ಸದಾ ಸಹಕಾರ ಕೊಡಲು ಬದ್ಧ ಎಂದರು.
ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಎಸ್.ಝಳಕಿ ಮಾತನಾಡಿ, ಈ ಆಂಗ್ಲ ಮಾಧ್ಯಮ ಶಾಲೆಯು ಡಾ.ಜಾಮದಾರ ಅವರ ಕನಸಿನ ಕೂಸು. ಈ ಶಾಲೆಯು ೨೦೦೯ ರಲ್ಲಿ ಆರಂಭವಾದರೂ ಸಾಕಷ್ಟು ಜನರ ಪರಿಶ್ರಮದಿಂದ ೨೦೧೪ ರಲ್ಲಿ ಈ ಶಾಲೆಯು ಸಿಬಿಎಸ್‌ಇ ಮಾನ್ಯತೆ ಪಡೆದುಕೊಂಡಿತ್ತು. ಆರಂಭದಲ್ಲಿ ಕೇವಲ ೨೫ ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆಯು ಇಂದು ೬೮೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂತಸದಾಯಕ ಸಂಗತಿ. ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ, ಆಡಳಿತ ಮಂಡಳಿ ಸದಸ್ಯ ಎಂ.ಬಿ.ಆದಿಗೊಂಡ, ಡಾ.ನಿತಿನ್ ಅಗರವಾಲ ಮಾತನಾಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಸದಾನಂದ ಯಳಮೇಲಿ, ಸುರೇಶಗೌಡ ಪಾಟೀಲ, ಸಚೀನ ಬಾಗೇವಾಡಿ, ಸೋಮನಾಥ ಪಾಟೀಲ, ಶಬ್ಬಿರಹ್ಮದ ನದಾಫ, ಶೈಲಶ್ರೀ ತೇರದಾಳಮಠ, ಪ್ರಭಾವತಿ ರಾಯಗೊಂಡ, ಲಕ್ಷ್ಮೀ ಮಾಲಗಾರ, ಹಿಟ್ನಳ್ಳಿ, ಪ್ರತಿಭಾ ಮಸಬಿನಾಳ, ಮುತ್ತಪ್ಪ ಪೂಜಾರಿ, ಅನುಷಾ ಕುಲಕರ್ಣಿ, ದೀಪಾ ಅಂಗಲಗಿ, ಮುಖ್ಯಶಿಕ್ಷಕಿ ಆರ್.ಎಂ. ರೋಣದ ಇದ್ದರು. ಸರ್ವ ಆಡಳಿತ ಮಂಡಳಿ ಸದಸ್ಯರನ್ನು ಉಭಯ ಶಾಲೆಯಿಂದ ಸನ್ಮಾನಿಸಲಾಯಿತು.
ಎಸ್.ಎಂ.ಬಿಸ್ಟಗೊಂಡ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ದೀಪಾ ಅಂಕಲಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

