ವಿಜಯಪುರ: ಡಿ.ಸಿ.ಸಿ. ಬ್ಯಾಂಕ್ ಕನಮಡಿ ಶಾಖೆಯಲ್ಲಿ ಗ್ರಾಹಕರ ಸಭೆಯು ಸೆ.೨೭ ರಂದು ಜರುಗಿತು.
ಸಭೆಯಲ್ಲಿ ಗ್ರಾಹಕರಾದ ಸಚೀನ ರುದ್ರಗೌಡ, ಶಂಕರಗೌಡ ಬಿರಾದಾರ, ಎಮ್.ಪಿ. ಶೀಳಿನ, ಸುರೇಶ ಹಾದಿಮನಿ, ನಿಂಗಪ್ಪ ಬಿರಾದಾರ, ಪಿ. ವಾಯ್. ಯಳಜೇರಿ ಸಲಹೆ ಹಾಗೂ ಶಾಖೆಯ ಬೆಳವಣಿಗೆ ಹಾಗೂ ಅಭಿವೃದ್ದಿ ಬಗ್ಗೆ ಸಲಹೆಗಳನ್ನು ಪಡೆಯಲಾಯಿತು. ಮತ್ತು ಬ್ಯಾಂಕಿನಿಂದ ಗ್ರಾಹಕರಿಗೆ ಸಿಗುತ್ತಿರುವ ಸಾಲ ಸೌಲಭ್ಯ ಯೋಜನೆಗಳು ಹಾಗೂ ಠೇವಣಿ ಯೋಜನೆಗಳ ಬಗ್ಗೆ ವಿವರಿಸಲಾಯಿತು. ಗ್ರಾಹಕರು ಸಭೆಯಲ್ಲಿ ವ್ಯಕ್ತಪಡಿಸಿದ ಕೆಲವೊಂದು ಅಭಿಪ್ರಾಯಗಳಿಗೆ ಸ್ಥಳದಲ್ಲಿಯೇ ಪರಿಹರಿಸಲಾಯಿತು. ಹಾಗೂ ಕೆಲವೊಂದು ಸಲಹೆಗಳನ್ನು ಬ್ಯಾಂಕಿನ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಲಾಯಿತು.
ಸಭೆಯಲ್ಲಿ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಸತೀಶ ಡಿ. ಪಾಟೀಲ, ವಿಜಯಪುರ ತಾಲೂಕಾ ನೋಡಲ್ ಅಧಿಕಾರಿಗಳಾದ ಎಸ್.ಎನ್. ಪಾಟೀಲ, ಶಾಖಾ ವ್ಯವಸ್ಥಾಪಕರಾದ ಬಿ.ಎಸ್.ಕಾಂಬಳೆ ಹಾಗೂ ಶಾಖೆಯ ಸಿಬ್ಬಂದಿಯಾದ ನಾಗಪ್ಪ ನಾಟೀಕಾರ ಉಪಸ್ಥಿತರಿದ್ದರು.
Related Posts
Add A Comment