ಇಂಡಿ: ಪ್ರತಿ ಸಭೆಗೂ ಹಾಜರಿರದ ತಾಲೂಕು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರು ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು.
ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಮಾರ್ಗ ಸೂಚಿಯಂತೆ ಶಾಲಾ ಕಾಲೇಜು ಹಾಗೂ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸರಳವಾಗಿ ಯಾವುದೇ ಲೋಪವಿಲ್ಲದಂತೆ ವ್ಯವಸ್ಥಿತವಾಗಿ ಜಯಂತಿ ಆಚರಣೆ ಮಾಡಬೇಕು. ಅದಲ್ಲದೇ ತಾಲೂಕು ಆಡಳಿತದ ಆಶ್ರಯದಲ್ಲಿ ನಡೆಯುವ ಮಹಾತ್ಮ ಗಾಂಧಿಜೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಭಾಗವಹಿಸಬೇಕು.
ಇನ್ನು ಒಟ್ಟು 36 ತಾಲೂಕು ಅಧಿಕಾರಿಗಳಿದ್ದು, ಈ ಸಭೆಯಲ್ಲಿ ಇಬ್ಬರು ಹಾಜರಿದ್ದು ಉಳಿದ ಇಲಾಖೆ ತಾಲೂಕು ಅಧಿಕಾರಿಗಳು ಗೈರಾಗಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ,ತೋಟಗಾರಿಕೆ, ಕೃಷಿ, ಹೆಸ್ಕಾಂ, ಸಬ್ ರಿಜಿಸ್ಟರ್, ಖಜಾನೆ, ಪಶು ಇಲಾಖೆ, ಅಲ್ಪ ಸಂಖ್ಯಾತಬ ಬಿ ಸಿ ಎಮ್, ಕೆ ಅಸ್ ಆರ್ ಟಿ ಸಿ , ಕ್ರೀಡಾ ಹಾಗೂ ಅಗ್ಮಿ ಶಾಮಕ ಇಲಾಖೆ ತಾಲೂಕು ಅಧಿಕಾರಿಗಳು ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ
ಕ್ಷೇತ್ರ ಸಮಯನ್ವ ಅಧಿಕಾರಿ ನಡಗಡ್ಡಿ, ಪುರಸಭೆ ಆರೋಗ್ಯ ಕಿರಿಯ ಸಹಾಯಕ ಸೋಮನಾಯಕ, ಬಿಸಿಎಮ್ ನಾಗೇಶ ದುದಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಸಾಮಾಜಿಕ ಹೋರಾಟಗಾರ ವಿಕಾಸ ಗುಡಮಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

