ನಾಡಿನ ಹೆಸರಾಂತ ಕಲಾವಿದ ಸೋಮಶೇಖರ ಸಾಲಿ, ಜನ್ಮಶತಮಾನೋತ್ಸವ ೨೦೨೩ ರಲ್ಲಿರುವುದು ರಾಜ್ಯ ಕಲಾವಿದರಿಗೆ ಹೆಮ್ಮೆಯ ವಿಷಯ.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ, ಉತ್ತರ ಕರ್ನಾಟಕದ ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಜೊತೆಯಲ್ಲಿ ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡಿದ್ದ ಸೋಮಶೇಖರ ಸಾಲಿಯವರ ಜನ್ಮಶತಮಾನೋತ್ಸವದ ತನ್ಮಿತ್ಯ ಅವರ ಕಲಾಕೃತಿಗಳ ಪ್ರದರ್ಶನ ದಿನಾಂಕ ೨೮-೦೯-೨೦೨೩ ರಿಂದ ೩೦-೦೯-೨೦೨೩ರ ವರೆಗೆ ಸರಕಾರಿ ಆರ್ಟ ಗ್ಯಾಲರಿ ಪ್ರವಾಸೋಧ್ಯಮ ಇಲಾಖೆ ಹಳೆ ಐ.ಬಿ. ಅಂಬೇಡ್ಕರ ಸರ್ಕಲ್ ಹತ್ತಿರ, ವಿಜಯಪುರ ಇಲ್ಲಿ ಆಯೋಜಿಸಲಾಗಿದೆ.
ಪ್ರದರ್ಶನದ ಉದ್ಘಾಟಕರಾಗಿ ಸಂಸದ ರಮೇಶ ಜಿಗಜಿಣಗಿ, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಅತಿಥಿಗಳಾಗಿ ವಿಶ್ರಾಂತ ಉಪನ್ಯಾಸಕ ಪ್ರೊ. ಎಂ.ಐ.ಕುಮಟಗಿ, ವಿಶ್ರಾಂತ ಪ್ರಾಚಾರ್ಯ ಡಾ. ಜೆ. ಎಸ್. ಹಿರೇಮಠ ಹಾಗೂ ಹೆಸರಾಂತ ಹಿರಿಯ ಕಲಾವಿದ ಪಿ. ಎಸ್. ಕಡೇಮನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೋಮಶೇಖರ ಸಾಲಿಯವರ ಜನ್ಮಶತಮಾನೋತ್ಸವ ಸಮಿತಿ ಕಾರ್ಯದರ್ಶಿ ರಮೇಶ ಚವ್ಹಾಣ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

