ತಿಕೋಟಾ: ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸದ್ಗುರು ಶಿವಾನಂದ ಪ್ರಾಥಮಿಕ ಹಾಗೂ ಅಕ್ಕಮಹಾದೇವಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಿರಿಯರ ವಿಭಾಗದಲ್ಲಿ ಆರ್ಯನ್ ತೋಳೆ ಕ್ಲೇ ಮಾಡಲಿಂಗ್, ಸ್ಪೂರ್ತಿ ಅವಧಿ ಛದ್ಮವೇಷ, ಸಮರ್ಥ ಐನಾಪುರ ಹಿಂದಿ ಕಂಠಪಾಠ, ಅನನ್ಯ ಲೋಹಾರ ಭಕ್ತಿಗೀತೆ, ಸಮರ್ಥ ಪೋಳ ಚಿತ್ರಕಲೆ, ಸಹನಾ ಧರನಾಕರ ಆಶುಭಾಷಣ, ರೋಹಿಣಿ ಜಾಧವ ಕಥೆ ಹೇಳುವ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಹಿರಿಯರ ವಿಭಾಗದಲ್ಲಿ ಪೂಜಾ ಕುಂಬಾರ ಆಶುಭಾಷಣ, ಸಹನಾ ಮಸಳಿ ಛದ್ಮವೇಷ, ಸೌಂದರ್ಯ ಮಗದರಿ ಲಘು ಸಂಗೀತ, ಐಶ್ವರ್ಯ ಮಸಳಿ ಕವನ ವಾಚನ, ಸುಪ್ರೀಯಾ ಸೌದಿ ಸಂಸ್ಕೃತ ಕಂಠಪಾಠ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗದಲ್ಲಿ ಹಮಿಜಾನ ನದಾಪ್ ಹಿಂದಿ ಭಾಷಣ, ಐಶ್ವರ್ಯ ಬಿರಾದಾರ ಸಂಸ್ಕೃತ ಧಾರ್ಮಿಕ ಪಠಣ, ಹಮಿಜಾನ ನದಾಪ್ ಅರೇಬಿಕ್ ಧಾರ್ಮಿಕ ಪಠಣ, ರಕ್ಷಿತಾ ಪಾಟೀಲ ಕನ್ನಡ ಭಾಷಣ, ಐಶ್ವರ್ಯ ಬಿರಾದಾರ ಚರ್ಚಾಸ್ಪರ್ಧೆ, ದಿವ್ಯಾ ಹಿರೇಮಠ, ಛದ್ಮವೇಷ, ರಕ್ಷೀತಾ ಲೋಣಿ ಕವನ ವಾಚನ, ಲಕ್ಷ್ಮಿ ಹುನ್ನೂರ ಭಾವಗೀತೆ, ದೀಪಾ ಶುಂಠಿ ಆಶು ಭಾಷಣ ವಿಭಾಗದಲ್ಲಿ ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಸರ್ವಸದಸ್ಯರು, ಮುಖ್ಯಗುರುಗಳು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.
Related Posts
Add A Comment