ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಾಲು ಬಾಯಿ ಜ್ವರ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 4 ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಸೆ.26 ರಂದು ವಿಜಯಪುರ ತಾಲ್ಲೂಕಿನ ಅಹೇರಿ ಗ್ರಾಮದಲ್ಲಿ ನಾಗಠಾಣ ಶಾಸಕ ವಿಠಲ ಕಟಕದೊಂಡ ಗೋಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತಮ್ಮ ಜಾನುವಾರಗಳ ಸುರಕ್ಷತೆಗಾಗಿ ರೈತರು ಈ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರಾದ ಡಾ. ಆಶೋಕ ಘೋಣಸಗಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಎಸ್.ಕನಮಡಿ, ಡಾ. ಸುಜಾತಾ ಎಸ್.ಎಂ ಹಾಗೂ ಡಾ. ಬಾಳಾಸಾಹೇಬ ಭಂಡಿ ಉಪಸ್ಥಿತರಿದ್ದರು.
ಈ ಲಸಿಕಾ ಕಾರ್ಯಕ್ರಮವು ಸೆ. ರಿಂದ ಅ.25ರವರೆಗೆ ನಡೆಯುತ್ತದೆ.
Related Posts
Add A Comment