ವಿಜಯಪುರ: ನಗರದ ಸರ್ವ ಗಜಾನನ ಮಂಡಳಿಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ನಾನು ಹಾಗೂ ಮಹಾಮಂಡಳವು ಸದಾ ಬೆಂಬಲವಾಗಿ ಇರುತ್ತೇವೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಭರವಸೆ ನೀಡಿದರು.
ನಗರದ ಗಜಾನನ ಉತ್ಸವ ಮಹಾಮಂಡಳ ಶಿವಾಜಿ ವೃತ್ತ ವತಿಯಿಂದ 7ನೇ ದಿನದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸರ್ವ ಗಜಾನನ ಮಂಡಳಿಯ ಅಧ್ಯಕ್ಷರಿಗೆ ಸನ್ಮಾನ ಸಲುವಾಗಿ ಗಾಂಧಿ ವೃತ್ತದಲ್ಲಿ ಜ್ಞಾನಯೋಗಿ ವೇದಿಕೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಾರು 30 ವರ್ಷಗಳಿಂದ ನಾನು ಧಾರ್ಮಿಕ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ದೇಣಿಗೆ ಕೊಡುವ ಪ್ರಾರಂಭ ಮಾಡಿದ ಹೆಮ್ಮೆ ನನಗಿದೆ. ಹಬ್ಬದ ವಾತಾವರಣದಲ್ಲಿ ಗಣೇಶನ ವಿಸರ್ಜನೆ ಶಾಂತಿಯುತವಾಗಿ ನೆರವೇರಲೆಂದು ಆಶಿಸಿದರು.
ಮಾಳಿಂಗ ಮಹಾರಾಜರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉದ್ಘಾಟನೆಯನ್ನು ಡಿವೈಎಸ್ಪಿ ಬಸವರಾಜ ಯಲಿಗಾರ ನೆರವೇರಿಸಿದರು.
ಮಹಾಮಂಡಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ಬೆಂಬಲ : ಅಪ್ಪು ಪಟ್ಟಣಶೆಟ್ಟಿ
Related Posts
Add A Comment

