ಹೂವಿನ ಹಿಪ್ಪರಗಿ: ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯವಿದೆ. ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನಾನು ಶಾಸಕನಲ್ಲ ನಿಮ್ಮೆಲ್ಲರ ಸೇವಕ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು
ಮತಕ್ಷೇತ್ರದ ಹೂವಿನ ಹಿಪ್ಪರಗಿ, ಅಂಬಳನೂರ, ಅಂಬಳನೂರ ತಾಂಡಾ, ಆರೆಶಂಕರ, ಬ್ಯಾಲಿಹಾಳ, ಗ್ರಾಮಗಳ ಸಿಸಿ ರಸ್ತೆಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೂವಿನ ಹಿಪ್ಪರಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಗ್ರಾಮೀಣ ಭಾಗದ ರಸ್ತೆಗಳು ಬಹಳಷ್ಟು ಹದಗೆಟ್ಟಿದ್ದು ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಾನು ವಿರೋಧ ಪಕ್ಷದಲ್ಲಿದ್ದು ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಕೇಳುವವರಿಗೆ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿ ಮಾಡಿ ತೋರಿಸುವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿವುಬಾಯಿ ಮಾದರ, ಸಂಗಮೇಶ ಹಳ್ಳೂರ, ಶಾಂತಗೌಡ ನಾಡಗೌಡ, ಸಿದ್ದು ಹಾದಿಮನಿ, ಪ್ರಕಾಶ ತೋಟದ, ಅಶೋಕ ಶಿವಯೋಗಿ, ನಿಂಗಣ್ಣ ಶಿವಯೋಗಿ, ಮುರುಗೇಶ ತಾಳಿಕೋಟಿ, ಚಂದು ಗುಂಡಣ್ಣವರ, ಮಹಾಂತೇಶ ಚಕ್ರವರ್ತಿ, ದಸ್ತಗೀರ ದಳವಾಯಿ, ಸೇರಿದಂತೆ ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು
Related Posts
Add A Comment