ಮುದ್ದೇಬಿಹಾಳ: ತಾಲೂಕಿನ ಹಡಗಲಿ ಗ್ರಾಮದ ಬೀರಪ್ಪ ಹುಡೇದ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಹುಡೇದ ಕುಟುಂಬಸ್ಥರು ತಾಲೂಕು ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಬ್ರೆಡ್ ಮತ್ತು ಹಡಗಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಿದರು.
ಈ ವೇಳೆ ಮುತ್ತು ಟಕ್ಕಳಕಿ ಮಾತನಾಡಿ, ನಮ್ಮ ಅಜ್ಜನವರ ನೆನಪು ನಮ್ಮ ಜೊತೆ ಅಜರಾಮರವಾಗಿ ಉಳಿಯಲೆಂದು ಅವರ ಪುಣ್ಯಸ್ಮರಣೆಯ ದಿನ ಪ್ರತಿವರ್ಷವೂ ಕೂಡಾ ಏನಾದರೂ ದಾನ, ಕೊಡುಗೆ ನೀಡಬೇಕು ಎಂದು ನಾವು ತಿರ್ಮಾನಿಸಿದ್ದೆವೆ ಎಂದರು.
ಮುಖ್ಯಗುರು ಶಶಿಕಾಂತ ಚಲವಾದಿ, ಶಿಕ್ಷಕ ಮೋಹನ್ ಚವ್ಹಾಣ, ನೀಲಮ್ಮ ಹುಡೇದ, ಕಸ್ತೂರಿ ಹುನಗುಂದ, ದೇವಮ್ಮ ಪಾಟೀಲ, ಅಕ್ಕಮ್ಮ ಟಕ್ಕಳಕಿ, ಗುಳಮ್ಮ ಅಮಾತಿಗೌಡರ, ಜಯಶ್ರೀ ಚಿಕ್ಕನ್ನಳ್ಳಿ, ಭಾಗೀರಥಿ ಜೀನಗಿ, ಮುತ್ತು ಹುಡೇದ, ಹಣಮಂತ ಹುಡೇದ, ವಿದ್ಯಾ ಹುಡೇದ, ರೇಣುಕಾ ಹುಡೇದ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment