ಮುದ್ದೇಬಿಹಾಳ: ವಿದ್ಯಾರ್ಥಿಗಳಾದವರು ಕಲಿಕೆಯ ಜೊತೆಗೆ ಇನ್ನೀತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದಾಗ ಅಪಾರ ಜ್ಞಾನವನ್ನು ಬೆಳೆಸಿಕೊಳ್ಳಬಹುದು ಎಂದು ಶಿಕ್ಷಕ ಎ.ಎಸ್.ಬಾಗವಾನ ಹೇಳಿದರು.
ಪಟ್ಟಣದ ಹೊರಪೇಟಗಲ್ಲಿಯಲ್ಲಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಸಪ್ರಶ್ನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನವನ್ನು ವೃದ್ದಿಸಲು ಸಹಕಾರಿಯಾಗುತ್ತವೆ. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಹಾಗೂ ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವಲ್ಲಿ ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಮತ್ತು ಗಣೇಶೋತ್ಸವ ಸಮಿತಿಯ ಈ ಕಾರ್ಯ ಅತೀ ಶ್ಲಾಘನೀಯವಾದದ್ದು ಎಂದರು.
ರಸಪ್ರಶ್ನೆಗೆ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿದ ಕಾರಣ ಸೋಮು ಗಸ್ತಿಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಮಾರ ಶಿವಯೋಗಿಮಠ, ಸುಭಾಷ್ ಬಡಿಗೇರ, ಕಾಶಿಪತಿ ಪತ್ತಾರ, ಮುತ್ತಣ್ಣ ಮಡಿವಾಳರ, ಸೋಮಣ್ಣ ಗಸ್ತಿಗಾರ ಅತಿಥಿಗಳಾಗಿ ಆಗಮಿಸಿದ್ದರು.
ಅರ್ಜುನ್ ನಾಯಕ್, ಶಿವು ಚಿಮ್ಮಲಗಿ, ಮಾನಸಪ್ಪ ನಾಯಕ, ಬಸು ನಾಯಕ, ದೇವು ನಾಯಕ, ಶಿಕ್ಷಕರಾದ ರಮೇಶ ಮಡಿವಾಳರ, ಡಿ.ಆರ್.ಬೆಳ್ಳಿಕಟ್ಟಿ, ಮುತ್ತು ತಮ್ಮದಡ್ಡಿ ಸೇರಿದಂತೆ ಮತ್ತೀತರರು ಇದ್ದರು.
ಪ್ರಶಾಂತ ಕಲಾಲ ಕಾರ್ಯಕ್ರಮ ನಿರ್ವಹಿಸಿದರು.
Related Posts
Add A Comment