ಸಿಂದಗಿ: ಕಾಲುಬಾಯಿ ರೋಗವು ವೈರಾಣುವಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಲಸಿಕೆಯನ್ನು ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ. ಇದೀಗ ಸೆ.೨೬ರಿಂದ ಆರಂಭಿಸಿ ಅ.೨೫ರವರೆಗೆ ಉಚಿತ ಲಸಿಕೆ ನೀಡಲಾಗುತ್ತದೆ ಇದರ ಸದುಪಯೋಗವನ್ನು ರೈತರು ಬಾಂಧವರು ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪಶು ಇಲಾಖೆಯ ಆವರಣದಲ್ಲಿ ೪ನೆಯ ಸುತ್ತಿನ ಉಚಿತ ಲಸಿಕಾ ಅಭಿಯಾನವನ್ನು ಜಿಲ್ಲಾ ಪಂಚಾಯತ, ವಿಜಯಪುರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹಮ್ಮಿಕೊಂಡ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಕಾಲುಬಾಯಿ ರೋಗ ಬಂದಾಗ ಚಿಕಿತ್ಸೆಯ ಬದಲಾಗಿ ಲಸಿಕೆಯೇ ಮುಖ್ಯವಾಗಿದೆ ಎಂಬುದನ್ನು ರೈತರು ಅರಿಯಬೇಕು. ಪಶು ವೈದ್ಯರು ತಮ್ಮ ಮನೆ ಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ತಮ್ಮ ಜಾನುವಾರುಗಳಿಗೆ ಮರೆಯದೇ ಲಸಿಕೆ ಕೋಡಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ತಾಲೂಕು ಸಹಾಯಕ ನಿರ್ದೇಶಕ ಡಾ.ರಾಮು ರಾಠೋಡ ಮಾತನಾಡಿ, ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಿಗೆ ತಗಲುವ ರೋಗವಾಗಿದ್ದು ಜೊತೆಗೆ ಆರ್ಥಿಕತೆಯನ್ನು ನಷ್ಟವನ್ನುಂಟು ಮಾಡುವ ರೋಗವಾಗಿದ್ದು, ತಾಲೂಕಿನ ಎಲ್ಲ ರೈತ ಬಾಂಧವರು ತಪ್ಪದೇ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಬೇಕು. ತಾಲೂಕನ್ನು ಕಾಲುಬಾಯಿ ರೋಗ ಮುಕ್ತ ವಲಯವನ್ನಾಗಿಸಬೇಕು. ಲಸಿಕಾ ಅಭಿಯಾನದ ವೇಳೆ ನೆರವಿಗಾಗಿ ಪಶುಪಾಲನಾ ಸಹಾಯವಾಣಿ ೮೨೭೭೧೦೦೨೦೦ ಹಾಗೂ ತುರ್ತು ಪಶು ಚಿಕಿತ್ಸೆಗಾಗಿ ೧೯೬೨ ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

