ಬಸವನಬಾಗೇವಾಡಿ: ನಮ್ಮ ದೇಶ, ಸನಾತನ ಧರ್ಮ ಉಳಿಯಬೇಕು. ದೇಶ, ಧರ್ಮ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಹಿಂದು ಸಮಾಜವನ್ನು ಜಾಗೃತಿ ಮಾಡುವ ಜೊತೆಗೆ ದೇಶ, ಧರ್ಮವನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣವೆಂದು ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಹೇಳಿದರು.
ಪಟ್ಟಣದ ಬಸವಜನ್ಮಸ್ಮಾರಕದ ಮಹಾದ್ವಾರದ ಪಕ್ಕದಲ್ಲಿ ಹಿಂದು ಮಹಾಗಣಪತಿ ಪ್ರತಿಷ್ಠಾಪಿಸಿ ಗಣಪತಿ ಮೂರ್ತಿಗೆ ಸೋಮವಾರ ಪೂಜೆ ಸಲ್ಲಿಸಿ, ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಮ್ಮಲ್ಲಿಯೇ ಬೇಧ ನಿರ್ಮಾಣ ಮಾಡಿ ನಾವು ಒಡೆದ ಹೋದ ಪರಿಣಾಮದಿಂದ ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನ ದಲ್ಲಿ ಸಾರ್ವಜನಿಕ ಗಣಪತಿಯನ್ನು ಕೂಡಿಸಬಾರದು ಎಂದು ಕೋರ್ಟಿಗೆ ಹೋಗುತ್ತಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗಣಪತಿ ಕೂಡಿಸಬಾರದು ಎಂದು ಸುಪ್ರಿಂಕೋರ್ಟಿಗೆ ಹೋಗಿ ತಡೆಯಾಜ್ಞೆಯನ್ನು ತರುತ್ತಾರೆ. ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಈ ಪದ್ಧತಿಯನ್ನು ವಿರೋಧಿಸುತ್ತಾರೆ. ನಾವು ಬಾಯಿ ಮುಚ್ಚಿಕೊಂಡು ಕುಳಿತುಕೊಂಡರೆ ನಾವು ಈ ದುಷ್ಟರ ವಿರುದ್ಧ ದನಿ ಎತ್ತದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಕೂಡಿಸುವ ಗಣಪತಿಗೂ ವಿರೋಧ ಮಾಡುತ್ತಾರೆ ಎಂಬ ಅರಿವು ನಮ್ಮ ಸಮಾಜಕ್ಕೆ ಇಲ್ಲ. ಈ ದೃಷ್ಟಿಯಿಂದ ಹಿಂದು ಮಹಾಗಣಪತಿ ಮಂಡಳಿಯು ಬಹಳಷ್ಟು ಕೆಲಸ ಮಾಡಬೇಕಿದೆ. ಸನಾತನ ಧರ್ಮವನ್ನು ಅವಹೇಳನ ಮಾಡುವ ಪರಿಸ್ಥಿತಿ ಇರುವದು ಖೇದಕರ ಸಂಗತಿ. ಮುಸ್ಲಿಂ-ಕ್ರೈಸ್ತರ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ಹಿಂದುಗಳು ಸೌಮ್ಯವಿರುವದರಿಂದಾಗಿ ಮಾತನಾಡುತ್ತಿದ್ದಾರೆ. ಹಿಂದು ಧರ್ಮದ ಉಳಿಯಲು ಆರ್‌ಎಸ್‌ಎಸ್, ಬಜರಂಗದಳ, ವಿಶ್ವಹಿಂದು ಪರಿಷತ್ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಹಿಂದು ಮಹಾಗಣಪತಿ ಮಂಡಳಿ ಅಧ್ಯಕ್ಷ ಅಶೋಕ ಹಾರಿವಾಳ, ಮುಖಂಡರಾದ ತಮ್ಮಣ್ಣ ಬಡಿಗೇರ, ಮಹೇಶ ಸಾಲವಾಡಗಿ, ಬಸವರಾಜ ಅಳ್ಳಗಿ, ಶ್ರೀಕಾಂತ ಚೌರಿ, ವಿಜಯ ಗೊಳಸಂಗಿ, ಮುದುಕು ಬಸರಕೋಡ, ದಯಾನಂದ ಸಾರವಾಡ, ಕಲ್ಲು ಕೊಟ್ರಶೆಟ್ಟಿ, ವಿರೇಶ ಗಬ್ಬೂರ, ಗುರುರಾಜ ವಂದಾಲ, ಬಸವರಾಜ ಗೊಳಸಂಗಿ, ಪದ್ಮರಾಜ ಒಡೆಯರ, ರೂಪಾ ಜಾಧವ, ವಿದ್ಯಾಶ್ರೀ ಬಡಿಗೇರ, ವೀಣಾ ಗಾಯಕವಾಡ, ಪೂಜಾ ವಾಡೇದ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

