ಬಸವನಬಾಗೇವಾಡಿ: ಹಾನಗಲ್ಲ ಕುಮಾರೇಶ ಸ್ವಾಮೀಜಿ ಸಮಾಜ ಸೇವೆಯಲ್ಲಿ ಬಹುದೊಡ್ಡ ಕೂಡುಗೆ ನೀಡಿದ್ದರು. ಅವರ ಬದುಕೇ ಒಂದು ವ್ಯಾಖ್ಯಾ ನ ಎಂದು ಹುಬ್ಬಳ್ಳಿ-ಹಾನಗಲ್ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಸ್ಥಳೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸವೇಶ್ವರ ಇಂಟರ್ ನ್ಯಾಷನಲ್ ಸ್ಕೂಲ್ (ಸಿಬಿಎಸ್‌ಸಿ) ಆವರಣದಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮೀಜಿಯವರ ೧೫೬ನೇ ಜಯಂತ್ಯೋತ್ಸವದ ನಿಮಿತ್ತ ಶ್ರೀಕುಮಾರ ಮಹಾಸ್ವಾಮೀಜಿಯವರ ಜೀವನ ದರ್ಶನ ಪ್ರವಚನದ ಸಾನಿಧ್ಯವಹಿಸಿ ಮಾತನಾಡಿದ ಅವರು, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಸಂತರ, ಶರಣರ, ಮಹಾನ್ ಪುರುಷರ ಜೀವನಾದರ್ಶಗಳು ಇತಿಹಾಸದಲ್ಲಿ ಉಳಿದುಕೊಳ್ಳುತ್ತವೆ. ಉದ್ಧಾತ ಚಿಂತನೆ ಮಾಡಿದಂತಹ ಮಹಾನ್ ವಿರಾಗಿ ಶ್ರೀಕುಮಾರೇಶ ಎಂದರು.
ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಪ್ರವಚನದಿಂದ ಮನಸ್ಸು ಪರಿಶುದ್ಧವಾಗುತ್ತದೆ. ಹೆಚ್ಚು ಹೆಚ್ಚು ಜನರು ಪ್ರವಚನವನ್ನು ಆಲಿಸಿ ಮನುಸ್ಸನ್ನು ಪಾವನಗೊಳಿಸಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಗುರು-ವಿರಕ್ತರಲ್ಲಿ ಭೇದ-ಭಾವವಿರುತ್ತದೆ ಆದರೆ ಬಸವನಬಾಗೇವಾಡಿಯಲ್ಲಿ ಇಲ್ಲ ಎಂದು ಹೇಳಿದರು.
ಬಿಳ್ಳೂರು ವಿರಕ್ತಮಠದ ಮುರುಘೇಂದ್ರ ಮಹಾಸ್ವಾಮೀಜಿ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಕುದರಿಸಾಲವಾಡಗಿ, ಚನ್ನಬಸವ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಸುರೇಶ ಹಾರಿವಾಳ, ಬಿ.ಕೆ.ಕಲ್ಲೂರ, ಭರತ ಅಗರವಾಲ, ಶೇಖರ ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ಬಸವರಾಜ ಹಾರಿವಾಳ, ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸರ್ವ ಪೂಜ್ಯರು ಇದ್ದರು.ಕು.ಸ್ಪೂರ್ತಿ ತುಪ್ಪದ, ಕು.ಸೌಭಾಗ್ಯ ಗೋಡೆಕರ ಭರತ ನಾಟ್ಯ ಪ್ರದರ್ಶಿಸಿದರು. ಗುರುಪಾದೇಶ್ವರ ಶಿವಾಚಾರ್ಯರು ಸ್ವಾಗತಿಸಿದರು, ಶಿಕ್ಷಕ ಎಚ್.ಬಿ.ಬಾರಿಕಾಯಿ ನಿರೂಪಿಸಿದರು, ಎಸ್.ಪಿ.ಮಡಿಕೇಶ್ವರ ವಂದಿಸಿದರು.
Related Posts
Add A Comment